ನುಡಿಸಿರಿಯಲ್ಲಿ ಬಾಡಿ ಬಿಲ್ಡರ್‍ಗಳಂತೆ ತಮ್ಮ ಕಟ್ಟುಮಸ್ತಾದ ದೇಹ ಸೌಂದರ್ಯ ಪ್ರದರ್ಶಿಸಿದ ಕಂಬಳದ ಕೋಣಗಳು

Kannada News, Regional, Top News No Comments on ನುಡಿಸಿರಿಯಲ್ಲಿ ಬಾಡಿ ಬಿಲ್ಡರ್‍ಗಳಂತೆ ತಮ್ಮ ಕಟ್ಟುಮಸ್ತಾದ ದೇಹ ಸೌಂದರ್ಯ ಪ್ರದರ್ಶಿಸಿದ ಕಂಬಳದ ಕೋಣಗಳು 14

ಮಂಗಳೂರು: ಮಂಗಳೂರಿನ ಮೂಡಬಿದ್ರೆಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಭಾಗವಾದ ಕೃಷಿಸಿರಿಯಲ್ಲಿ ಜೋಡಿ ಕೋಣಗಳು ಸ್ಪರ್ಧಾಳುಗಳಾಗಿ ಭಾಗವಹಿಸಿದವು.

ಕೃಷಿಸಿರಿಯ ಕಾರ್ಯಕ್ರಮಗಳಲ್ಲಿ ಒಂದಾದ ಕಂಬಳ ಓಟದ ಕೋಣಗಳ ಸೌಂದರ್ಯ ಸ್ಪರ್ಧೆಯಲ್ಲಿ ಸುಮಾರು 8 ಜೋಡಿ ಕೋಣಗಳು ಸ್ಪರ್ಧಾಳುಗಳಾಗಿ ಭಾಗವಹಿಸಿದವು. ಸ್ಪರ್ಧೆ ಆರಂಭಕ್ಕೂ ಮುನ್ನ ಮೆರವಣಿಗೆಯಲ್ಲಿ ಈ ಕೋಣಗಳನ್ನು ಕರೆತಂದಿದ್ದು, ಬಳಿಕ ಬಾಡಿ ಬಿಲ್ಡರ್‍ಗಳಂತೆ ತಮ್ಮ ಕಟ್ಟುಮಸ್ತಾದ ದೇಹ ಸೌಂದರ್ಯವನ್ನು ನೆರೆದ ಜನರ ಮುಂದೆ ಪ್ರದರ್ಶಿಸಿದವು.

ಸ್ಪರ್ಧೆಯಲ್ಲಿ ಭಾಗಿಯಾದ ಕೋಣಗಳನ್ನು ಕಂಬಳದ ದಿನದಂದು ಓಟಕ್ಕೆ ಸಿದ್ಧಪಡಿಸುವಂತೆ ಶೃಂಗಾರಗೊಳಿಸಲಾಗಿತ್ತು. 8 ಜೋಡಿಗಳ ದೇಹ ಸೌಂದರ್ಯ ಹಾಗೂ ಶೃಂಗಾರಗೊಳಿಸಿದ ರೀತಿಯನ್ನು ನೋಡಿ ತೀರ್ಪಗಾರರು ಗುರುತಿಸಿದ ಮೂರು ಜೋಡಿಗಳಿಗೆ ಬಹುಮಾನ ನೀಡಲಾಯಿತು.

  • ಮೊದಲ ಸ್ಥಾನಕ್ಕೆ 50,000 ರೂ.,
  • ದ್ವಿತೀಯ ಸ್ಥಾನಕ್ಕೆ 30,000 ರೂ. ಹಾಗೂ
  • ಮೂರನೇ ಸ್ಥಾನಕ್ಕೆ 20,000 ರೂ.

ಹೀಗೆ ಒಟ್ಟು 1 ಲಕ್ಷ ರೂ. ಬಹುಮಾನವನ್ನು ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಕೋಣಗಳ ಮಾಲೀಕರಿಗೆ ವಿತರಿಸಲಾಯಿತು. ಕಂಬಳದ ಕೋಣಗಳನ್ನು ಕೇವಲ ಕಂಬಳ ಇದ್ದಾಗ ಮಾತ್ರ ಹೊರತರುತ್ತಿದ್ದ ಮಾಲೀಕರು ಕಂಬಳದಂತೆಯೇ ಸಮ್ಮೇಳನಕ್ಕೆ ಶೃಂಗರಿಸಿ ಸ್ಪರ್ಧೆಗಾಗಿ ಕರೆತಂದಿದ್ದರು.

ಒಟ್ಟಿನಲ್ಲಿ ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಕೋಣಗಳು ಸಾಹಿತ್ಯ ಸಮ್ಮೇಳದಲ್ಲೂ ತನ್ನ ಸೌಂದರ್ಯವನ್ನು ಪ್ರದರ್ಶಿಸಿ ಕನ್ನಡದ ಕಂಪಿನೊಂದಿಗೆ ಕಂಬಳದ ಕಂಪನ್ನು ಪಸರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

Leave a comment

Back to Top

© 2015 - 2017. All Rights Reserved.