ಹುಚ್ಚ ವೆಂಕಟ್ ಮೇಲೆ ಹಲ್ಲೆ

Entertainment, Kannada News No Comments on ಹುಚ್ಚ ವೆಂಕಟ್ ಮೇಲೆ ಹಲ್ಲೆ 30

ಬೆಂಗಳೂರು: ನಟ ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆದಿದೆ. ರಾತ್ರಿ ಊಟ ಪಾರ್ಸಲ್ ಕಟ್ಟಿಸಿಕೊಂಡು ನಡೆದು ಮನೆಗೆ ಹೋಗುತ್ತಿದ್ದ ವೇಳೆ ಹುಚ್ಚ ವೆಂಕಟ್‌ಗೆ ಹೆಲ್ಮೆಟ್‌ನಿಂದ ವ್ಯಕ್ತಿಯೊಬ್ಬರು ಥಳಿಸಿದ್ದಾರೆ.

ನವೆಂಬರ್‌ 29ರಂದು ಯಶವಂತಪುರದಲ್ಲಿ ಈ ಘಟನೆ ನಡೆದಿದ್ದು, ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಗುಂಪಿಗೂ ಹುಚ್ಚ ವೆಂಕಟ್‌ಗೂ ಕ್ಷುಲ್ಲಕ ವಿಚಾರವಾಗಿ ಜಗಳ ನಡೆದಿದೆ. ಹುಚ್ಚ ವೆಂಕಟ್‌ ತಮ್ಮ ಎಂದಿನ ಶೈಲಿಯಲ್ಲೇ ಬೈಯ್ದಿದ್ದಾರೆ. ಆ ಗುಂಪಿನಲ್ಲಿದ್ದವ ಹೆಲ್ಮೆಟ್‌ನಿಂದ ಹುಚ್ಚ ವೆಂಕಟ್‌ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆಸಿಕೊಂಡ ವೆಂಕಟ್‌ ಮತ್ತೇನು ಮಾತನಾಡದೆ ಸುಮ್ಮನೆ ಹೋಗುತ್ತಿರುವುದು ಕೂಡ ದೃಶ್ಯದಲ್ಲಿ ಸೆರೆಯಾಗಿದೆ.

ಈ ಕುರಿತು ಹುಚ್ಚ ವೆಂಕಟ್ ಅವರು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಯಾವುದೋ ಒಂದು ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಗಲಾಟೆ ಶುರುವಾಯ್ತು. ಅವರು ಡ್ರಿಂಕ್ಸ್ ಮಾಡಿದ್ರು. ಆ ಬಳಿಕ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದೇವೆ ಅಂತ ಹೇಳಿದ್ದಾರೆ. ಈ ಕುರಿತು ಯಾವುದೇ ಕೇಸ್‌ ದಾಖಲಾಗಿಲ್ಲ. 

Related Articles

Leave a comment

Back to Top

© 2015 - 2017. All Rights Reserved.