ಪ್ರತಾಪ್ ಸಿಂಹರನ್ನು ಜೈಲಿಗೆ ಕಳುಹಿಸುವುದು ಬೇಡ ಎಂದು ನಾನೇ ಹೇಳಿದೆ: ಸಿ.ಎಂ ಸಿದ್ದರಾಮಯ್ಯ

BREAKING NEWS, Kannada News, Regional, Top News No Comments on ಪ್ರತಾಪ್ ಸಿಂಹರನ್ನು ಜೈಲಿಗೆ ಕಳುಹಿಸುವುದು ಬೇಡ ಎಂದು ನಾನೇ ಹೇಳಿದೆ: ಸಿ.ಎಂ ಸಿದ್ದರಾಮಯ್ಯ 22

ಬೆಂಗಳೂರು: ಹುಣಸೂರಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸುವುದಕ್ಕೆ ಅವಕಾಶವಿದೆ. ಆದರೆ ನಾನೇ ಬೇಡ ಎಂದು ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ಸಂಸದ ಪ್ರತಾಪ್‌ ಸಿಂಹ ತಾವೇ ಖುದ್ದಾಗಿ ವಾಹನ ಚಾಲನೆ ಮಾಡಿಕೊಂಡು ಹೋಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಅಜಾಗರೂಕ ಹಾಗೂ ವೇಗದ ಚಾಲನೆ, ಸರಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಇದೆಲ್ಲವೂ ಜಾಮೀನು ರಹಿತ ಅಪರಾಧಗಳು. ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸುವುದಕ್ಕೆ ಅವಕಾಶವಿದೆ. ಆದರೆ ನಾನೇ ಬೇಡ ಎಂದು ಹೇಳಿದ್ದೇನೆ. ಅವರೊಬ್ಬರು ಸಂಸದರಿದ್ದಾರೆ, ಬೇಡ ಬಿಡಿ ಎಂದು ತಿಳಿಸಿದ್ದೇನೆ ಎಂದರು.

ಅಲ್ಲದೆ ಈ ವೇಳೆ ಸಂಸದ ಪ್ರತಾಪ್‌ ಸಿಂಹ ಅವರಿಗೆ ಕಾಮ…ನ್‌ ಸೆನ್ಸ್‌ ಇಲ್ಲ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ. ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ವೇಳೆ ನಡೆದ ಘಟನೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಗುಂಡಾ ರಾವ್‌ ಎಂದು ಸಂಸದ ಪ್ರತಾಪ್‌ ಸಿಂಹ ವ್ಯಂಗ್ಯ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಾಪ್‌ ಸಿಂಹ ಅವರಿಗೆ ಕಾಮನ್‌ ಸೆನ್ಸ್‌ ಇಲ್ಲ. ಅವರಂತೆ ಬಾಯಿಗೆ ಬಂದಂತೆ ಮಾತನಾಡುವುದಕ್ಕೆ ನಾವು ಸಿದ್ದರಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದೀಯ ಭಾಷೆ ಎಂಬುದು ಇರುತ್ತದೆ. ಅದನ್ನು ಅರಿತುಕೊಳ್ಳಲಿ. ನಾವು ಇವರ ಮಟ್ಟಕ್ಕೆ ಇಳಿದು ಮಾತನಾಡಬೇಕೆ ?” ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ವಿನಾ ಕಾರಣ ರಾಜ್ಯದಲ್ಲಿ ಕೋಮು ಗಲಭೆ ನಡೆಸಲು ಯತ್ನಿಸುತ್ತಿದೆ. ನಾವು ಅವರ ರಹಸ್ಯ ಕಾರ್ಯಸೂಚಿ ಜಾರಿಗೆ ಅವಕಾಶ ನೀಡುವುದಿಲ್ಲ. ಹನುಮ ಜಯಂತಿ ನಡೆಸುವುದಕ್ಕೆ ನಮ್ಮದೂ ಸಹಮತವಿದೆ. ಪೊಲೀಸರು ತಿಳಿಸಿದ ಮಾರ್ಗದಲ್ಲಿ ಮೆರವಣಿಗೆ ಸಾಗಿದರೆ ಅಭ್ಯಂತರವಿರಲಿಲ್ಲ. ಆದರೆ ಪ್ರತಾಪ್‌ ತಾನು ಹೇಳಿದ ಮಾರ್ಗದಲ್ಲೇ ಮೆರವಣಿಗೆ ಸಾಗಬೇಕು ಎಂದು ಹಠ ಹಿಡಿದಿದ್ದರಿಂದ ಈ ಘಟನೆ ನಡೆದಿದೆ ಎಂದು ಹೇಳಿದರು.

Related Articles

Leave a comment

Back to Top

© 2015 - 2017. All Rights Reserved.