ರಸ್ತೆ ಬದಿಯಲ್ಲಿ ಈ ಕೆಲಸ ಮಾಡಿ ಮಾನವೀಯತೆ ಮೆರೆದ ನಟ ಉಪೇಂದ್ರ

Entertainment, Kannada News, Top News No Comments on ರಸ್ತೆ ಬದಿಯಲ್ಲಿ ಈ ಕೆಲಸ ಮಾಡಿ ಮಾನವೀಯತೆ ಮೆರೆದ ನಟ ಉಪೇಂದ್ರ 14

ಮಂಗಳೂರು: ರಿಯಲ್ ಸ್ಟಾರ್ ಹಾಗೂ ಕೆ.ಪಿ.ಜೆ.ಪಿ ಸ್ಥಾಪಕ ಉಪೇಂದ್ರ ಅವರು ಮಾನವೀಯತೆ ಮೆರೆದಿದ್ದಾರೆ. ಅಂಧ ಮಕ್ಕಳ ಸಹಾಯಕ್ಕಾಗಿ ರಸ್ತೆ ಬದಿಯಲ್ಲಿ ಹಾಡು ಹಾಡುತ್ತಾ ದೇಣಿಗೆ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ನಟ ಕಾರಿನಿಂದ ಇಳಿದು ಮಕ್ಕಳ ಜೊತೆ ಬೆರೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ರಸ್ತೆ ಬದಿ ಹಾಡುತ್ತಾ ದೇಣಿಗೆ ಯಾಚಿಸುತ್ತಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ತನ್ನ ಕಾರಿನಲ್ಲಿ ಹೋಗುತ್ತಿದ್ದ ನಟ ಉಪೇಂದ್ರ, ತಕ್ಷಣ ಕಾರು ನಿಲ್ಲಿಸಿ ಹಾಡು ಹೇಳುತ್ತಿದ್ದ ಅಂಧ ಮಕ್ಕಳ ಬಳಿ ಹೋಗಿದ್ದಾರೆ. ಮಕ್ಕಳ ಹಾಡಿಗೆ ಮೆಚ್ಚಿ ಮೂರು ಸಾವಿರ ರೂಪಾಯಿಯನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಬಳಿಕ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿ ಕಾರು ಹತ್ತಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.