ಇದೇ ಡಿಸೆಂಬರ್ 23ಕ್ಕೆ ಬಾಕ್ಸಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ ವಿಜೇಂದರ್ ಸಿಂಗ್

Kannada News, Sports No Comments on ಇದೇ ಡಿಸೆಂಬರ್ 23ಕ್ಕೆ ಬಾಕ್ಸಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ ವಿಜೇಂದರ್ ಸಿಂಗ್ 19

ನವದೆಹಲಿ: ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಇದೇ ಡಿಸೆಂಬರ್ 23ರಂದು ಬಾಕ್ಸಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ.

ಘಾನಾದ ಇಮೆಸ್ಟ್ ಅಮುಜು ವಿರುದ್ಧ ಪಂದ್ಯ ನಡೆಯಲಿದ್ದು, ಡಬ್ಲ್ಯುಬಿಒ ಓರಿಯಂಟಲ್ ಮತ್ತು ಏಷ್ಯಾ ಫೆಸಿಫಿಕ್ ಸೂಪರ್ ಮಿಡಲ್ ವೇಟ್ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಇಮೆಸ್ಟ್ ಅಮುಜು ವಿರುದ್ಧ ವಿಜೇಂದರ್ ಸಿಂಗ್ ಹೋರಾಟ ನಡೆಸಲಿದ್ದಾರೆ.

ವಿಜೇಂದರ್ ಸಿಂಗ್ ಸತತ 9 ಫೈಟ್ ಗಳನ್ನು ಗೆದ್ದು ಅಜೇಯರಾಗಿ ಉಳಿದಿದ್ದಾರೆ. ಆಗಸ್ಟ್ ನಲ್ಲಿ ಚೀನಾದ ನಂ.1 ಬಾಕ್ಸರ್ ಜುಲ್ಫಿಕರ ಮೈಮೈತ್ ಅಲಿ ವಿರುದ್ಧ ಕೊನೆ ಪಂದ್ಯವನ್ನು ಆಡಿದ್ದರು. ಇಮೆಸ್ಟ್ ಅನುಜು ನಂತರ ವಿಜೇಂದರ್ ಮುಂದಿನ ವರ್ಷ ಮಾರ್ಚ್ ನಲ್ಲಿ ಬ್ರಿಟನ್ ನ ರಾಕಿ ಫೀಲ್ಡಿಂಗ್ ವಿರುದ್ಧ ಸೆಣಸಲಿದ್ದಾರೆ. ಇಮೆಸ್ಟ್ ಅನುಜು ಈ ಹಿಂದೆ 26 ಪಂದ್ಯಗಳನ್ನು ಆಡಿದ್ದು ಅದರಲ್ಲಿ 23 ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್ ನಲ್ಲಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.