ಧರಣಿ ಕೂತಿದ್ದ ವರನ ಮನೆಗೆ ಭೇಟಿ ನೀಡಿದ ಹೆಚ್.ಡಿ ಕುಮಾರಸ್ವಾಮಿ

BREAKING NEWS, Kannada News, Regional, Top News No Comments on ಧರಣಿ ಕೂತಿದ್ದ ವರನ ಮನೆಗೆ ಭೇಟಿ ನೀಡಿದ ಹೆಚ್.ಡಿ ಕುಮಾರಸ್ವಾಮಿ 25

ಮಂಡ್ಯ: ತನ್ನ ವಿವಾಹಕ್ಕೆ ಹೆಚ್‌.ಡಿ.ಕೆ ಅವರು ಬರಲೇಬೇಕೆಂದು ಧರಣಿ ಕುಳಿತಿದ್ದ ಯುವಕನ ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ವಧುವರರನ್ನು ಹಾರೈಸಿದ್ದಾರೆ.

ಕೆಲದಿನಗಳ ಹಿಂದೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ರವಿ ಎಂಬಾತ ಕುಮಾರಸ್ವಾಮಿ ಅವರು ವಿವಾಹಕ್ಕೆ ಬರಲೇಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದ. ಈತನಿಗೆ ತನ್ನ ಅಕ್ಕನ ಮಗಳೊಂದಿಗೆ ಡಿ.1ರಂದು ವಿವಾಹ ನಿಗದಿಯಾಗಿತ್ತು. ವಿವಾಹದ ಆಮಂತ್ರಣ ಪತ್ರಿಕೆಯನ್ನು ಹೆಚ್‌.ಡಿ.ಕುಮಾರಸ್ವಾಮಿ ಅವರಿಗೂ ತಲುಪಿಸಿದ್ದ. ಆದರೆ, ಗ್ರಾಮದ ಮುಖಂಡರೊಬ್ಬರು ಮದುವೆಗೆ ಅವರನ್ನು ಕರೆತರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ರವಿ ಪ್ರತಿಭಟನೆ ನಡೆಸಿದ್ದ.

ಪ್ರತಿಭಟನೆ ಮಾಹಿತಿ ತಿಳಿದು ರವಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು, ಮದುವೆಗೆ ಬರಲಾಗುವುದಿಲ್ಲ. ಆದರೆ ಮದುವೆಯಾದ ನಂತರ ಮನೆಗೆ ಬರುತ್ತೇನೆ ಎಂದು ಭರವಸೆ ನೀಡಿದ್ದರು. ತನ್ನ ನೆಚ್ಚಿನ ನಾಯಕನ ಭರವಸೆಯಿಂದ ರವಿ ಪ್ರತಿಭಟನೆ ಕೈಬಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಕೊಟ್ಟ ಮಾತಿನಂತೆ ಅಭಿಮಾನಿ ಮನೆಗೆ ಆಗಮಿಸಿರುವ ಕುಮಾರಸ್ವಾಮಿ ಅವರು ಮಂಗಳವಾರ ಭೇಟಿ ನೀಡಿ ನವ ವಧುವರನಿಗೆ ಆಶೀರ್ವದಿಸಿ ಶುಭ ಕೋರಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.