ಮೋದಿ-ವಿರಾಟ್ ನಡುವೆ ಟ್ವಿಟರ್ ಪೈಪೋಟಿ..!

Kannada News, National, Sports, Top News No Comments on ಮೋದಿ-ವಿರಾಟ್ ನಡುವೆ ಟ್ವಿಟರ್ ಪೈಪೋಟಿ..! 11

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ಟ್ವಿಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳಿರುವ ಭಾರತೀಯನೆಂಬ ಗೌರವವನ್ನು ಉಳಿಸಿಕೊಂಡಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಅವರ ಹಿಂಬಾಲಕರ ಸಂಖ್ಯೆ ಶೇ. 52ರಷ್ಟು ಹಿಗ್ಗಿದೆ. ಅಲ್ಲದೆ ಇದೇ ಅವಧಿಯಲ್ಲಿ ಟೀಮ್‌ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಅವರ ಜನಪ್ರಿಯತೆ ಶೇ. 61ರಷ್ಟು ಹಿಗ್ಗಿದೆ.

ಮೋದಿ ಅವರಿಗೆ 2016ರಲ್ಲಿ 2.46 ಕೋಟಿ ಫಾಲೋವರ್‌ಗಳಿದ್ದರು. 2017ರ ಡಿಸೆಂಬರ್‌ 4ಕ್ಕೆ ಅದು 3.75 ಕೋಟಿಗೇರಿದೆ. ವಿರಾಟ್‌ ಕೊಹ್ಲಿಗೆ ಕಳೆದ ವರ್ಷ 1.29 ಕೋಟಿ ಫಾಲೋವರ್‌ಗಳಿದ್ದರೆ ಈಗ 2.08 ಕೋಟಿಗೇರಿದೆ.

ಕ್ರಿಕೆಟ್‌ ದಂತ ಕಥೆ ಸಚಿನ್‌ ತೆಂಡೂಲ್ಕರ್‌ ಅವರ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ ಈ ವರ್ಷ ಶೇಕಡಾ 56ರಷ್ಟು ಹೆಚ್ಚಿದೆ. ವಿಶೇಷವೆಂದರೆ, ಸಚಿನ್‌ ತೆಂಡೂಲ್ಕರ್‌ ಮತ್ತು ವಿರಾಟ್‌ ಕೊಹ್ಲಿ ಇದೇ ಮೊದಲ ಬಾರಿಗೆ ಟ್ವಿಟರ್‌ ಜನಪ್ರಿಯತೆಯಲ್ಲಿ ಟಾಪ್‌ 10 ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ.

ಚಿತ್ರ ನಟರಾದ ಶಾರುಖ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಅವರ ಫಾಲೋವರ್‌ಗಳ ಸಂಖ್ಯೆ ಶೇಕಡಾ 40ರಷ್ಟು ಹೆಚ್ಚಾಗಿದೆ. ಶಾರುಖ್‌ ಖಾನ್‌ಗೆ 3.09 ಕೋಟಿ ಫಾಲೋವರ್‌ಗಳಿದ್ದರೆ, ಸಲ್ಮಾನ್‌ ಖಾನ್‌ಗೆ 2.85 ಕೋಟಿ ಫಾಲೋವರ್‌ಗಳಿದ್ದಾರೆ.

ಟ್ವಿಟರ್‌ ಹೀರೊಗಳು

  1. ನರೇಂದ್ರ ಮೋದಿ
  2. ಸಚಿನ್‌ ತೆಂಡೂಲ್ಕರ್‌
  3. ಶಾರುಖ್‌ ಖಾನ್‌
  4. ಸಲ್ಮಾನ್‌ ಖಾನ್‌
  5. ಅಮಿತಾಬ್‌ ಬಚ್ಚನ್‌
  6. ವಿರಾಟ್‌ ಕೊಹ್ಲಿ
  7. ಆಮಿರ್‌ ಖಾನ್‌
  8. ದೀಪಿಕಾ ಪಡುಕೋಣೆ
  9. ಅಕ್ಷಯ್‌ ಕುಮಾರ್‌
  10. ಹೃತಿಕ್‌ ರೋಷನ್‌

Related Articles

Leave a comment

Back to Top

© 2015 - 2017. All Rights Reserved.