ಬ್ರಿಟನ್ ಪ್ರಧಾನಿ ಹತ್ಯೆಗೆ ವಿಫಲ ಯತ್ನ

International, Kannada News No Comments on ಬ್ರಿಟನ್ ಪ್ರಧಾನಿ ಹತ್ಯೆಗೆ ವಿಫಲ ಯತ್ನ 13

ಬ್ರಿಟನ್: ಪ್ರಧಾನಿ ಥೆರೆಸಾ ಮೇ ಅವರನ್ನು ಹತ್ಯೆಗೆ ರೂಪಿಸಿದ್ದ ಸಂಚನ್ನು ಭದ್ರತಾ ಪಡೆಗಳು ಭಗ್ನಗೊಳಿಸಿದೆ.

ಈ ವಿಷಯವನ್ನು ಯು.ಕೆ ಮೆಟ್ರೊಪಾಲಿಟನ್ ಪೊಲೀಸರು ಬುಧವಾರ ಬಹಿರಂಗಪಡಿಸಿದ್ದಾರೆ. ಕಳೆದ ವಾರ ಇಬ್ಬರು ವ್ಯಕ್ತಿಗಳು ಥೆರೆಸಾರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು, ಅವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳನ್ನು ಉತ್ತರ ಲಂಡನ್ ಮೂಲದ ರೆಹಮಾನ್ (20), ಬಿರ್ಮಿಂಗ್‍ಮನ್‍ನ ಇಮ್ರಾನ್ (21) ಎಂದು ಗುರುತಿಸಲಾಗಿದೆ. ಸ್ಥಳೀಯ ಡೌನಿಂಗ್ ಸ್ಟ್ರೀಟ್ ಪ್ರದೇಶದಲ್ಲಿ ಥೆರೆಸಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಾರೆಂದು ತಿಳಿದು ಸ್ಫೋಟಕಗಳನ್ನು ಬಳಸಿ ಹತ್ಯೆಗೆ ಸಂಚು ರೂಪಿಸಿದ್ದರು. ಅವರ ಮೇಲೆ ಅನುಮಾನ ಬಂದು ಪೊಲೀಸರು ವಶಕ್ಕೆ ಪಡೆದ ಮೇಲೆ ವಿಷಯ ಬಹಿರಂಗವಾಗಿದೆ.

Related Articles

Leave a comment

Back to Top

© 2015 - 2017. All Rights Reserved.