ಸಮಾನತೆಯ ಸಮಾಜದ ಕನಸು ಕಂಡವರು ಡಾ.ಬಿ.ಆರ್.ಅಂಬೇಡ್ಕರ್: ಶಾಸಕ ಜಿ.ಟಿ.ದೇವೇಗೌಡ

Kannada News, Regional No Comments on ಸಮಾನತೆಯ ಸಮಾಜದ ಕನಸು ಕಂಡವರು ಡಾ.ಬಿ.ಆರ್.ಅಂಬೇಡ್ಕರ್: ಶಾಸಕ ಜಿ.ಟಿ.ದೇವೇಗೌಡ 143

ಮೈಸೂರು: ದೇಶದಲ್ಲಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡುವ ಕನಸ್ಸನ್ನು ಡಾ.ಬಿ.ಆರ್.ಅಂಬೇಡ್ಕರ್‍ ಅವರು ಕಂಡಿದ್ದರು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಇಂದು ಕರ್ನಾಟಕ ದಲಿತ ಜನ ಸೇವಾ ಸಮಿತಿ, ಮೈಸೂರು ಜಿಲ್ಲಾ ಶಾಖೆ ಇವರು ಇಲವಾಲದಲ್ಲಿರುವ ರಾಷ್ಟ್ರ ಮತ್ತು ರಾಜ್ಯ ಶೌರ್ಯ ಪ್ರಶಸ್ತಿ ವಿಜೇತ ಮಾ|| ಎಸ್.ಎಸ್.ಮನೋಜ್ ಅಂಗವಿಕಲರ ಮತ್ತು ವೃದ್ದರ ಸೇವಾಶ್ರಮದಲ್ಲಿ ಏರ್ಪಡಿಸಿದ್ದ ವಿಶ್ವಜ್ಞಾನಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‍ ಅವರ 61ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಆಶ್ರಮದ ವಿಕಲಚೇತನರಿಗೆ ಹಾಗೂ ವೃದ್ಧರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ ಅವರು ಜನಮಾನಸದಲ್ಲಿ ಅಜರಾಮರವಾಗಿ ಉಳಿದಿರುವ ವ್ಯಕ್ತಿಯಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವಕರು ಅವರ ಜೀವನ ಚರಿತ್ರೆ ಅಧ್ಯಯನ ಮಾಡಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.

ಅಂಬೇಡ್ಕರ್‍ ಅವರು ಇಡೀ ದೇಶದಲ್ಲಿಯೇ ಎಲ್ಲ ಸಮಾಜವನ್ನು ಒಂದೇ ರೀತಿ ಕಾಣುವ ರೀತಿಯಲ್ಲಿ ಕೆಲಸ ಮಾಡಿದರು. ಸಾಮಾಜಿಕ ನ್ಯಾಯಕ್ಕಾಗಿ ದುಡಿದ ಅವರು, ಎಲ್ಲ ವರ್ಗದ ಜನರಿಗೆ ದಾರಿ ದೀಪವಾಗಿದ್ದರು, ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಿದ್ದಾರೆ ಎಂದರು.

ಸಮಾರಂಭದಲ್ಲಿ ಹೆಚ್.ಎಸ್.ಶಿವಸ್ವಾಮಿ, ಟ್ರಸ್ಟ್ ಅಧ್ಯಕ್ಷರಾದ ತ್ರಿವೇಣಿ, ಎಸ್.ಕೆ.ರಮೇಶ್, ಸುಪ್ರೀತ್‍ಗೌಡ ಮಂಜುನಾಥ್, ಚಿಕ್ಕಚೆಲುವ, ಚೆಲುವರಾಜು, ತಾಂಡವಮೂರ್ತಿ, ಬೊಮ್ಮೇನಹಳ್ಳಿ ಮಹದೇವು, ಮಹದೇವು ಮೇಗಳಪುರ, ಸಿದ್ದರಾಜು ಹಾಜರಿದ್ದರು.

ಜಾಗೃತಿ ಸಭೆ, ಸಹಪಂಕ್ತಿ ಭೋಜನ ಕಾರ್ಯಕ್ರಮಕ್ಕೆ ಚಾಲನೆ

ಗುಂಗ್ರಾಲ್‍ಛತ್ರ: ಡಾ.ಬಿ.ಆರ್.ಅಂಬೇಡ್ಕರ್‍ ಅವರು ದೇಶ ಕಂಡ ಶ್ರೇಷ್ಠ ದಾರ್ಶನಿಕರಾಗಿದ್ದು, ಅವರು ರಚಿಸಿದ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನವಾಗಿದೆ ಎಂದರು.

ಶಾಸಕ ಜಿ.ಟಿ.ದೇವೇಗೌಡ ಗುಂಗ್ರಾಲ್‍ಛತ್ರ ಗ್ರಾಮದಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯವರು ಏರ್ಪಡಿಸಿದ್ದ ಸಂವಿಧಾನಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್‍ ಅವರ 61ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಸಭೆ ಮತ್ತು ಸಹಪಂಕ್ತಿ ಭೋಜನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷರಾದ ಕಾಳಮ್ಮ ಕೆಂಪರಾಮಯ್ಯ, ಎ.ಪಿ.ಎಂ.ಸಿ.ಸದಸ್ಯರಾದ ಜವರಪ್ಪ, ಇ.ಓ.ಲಿಂಗರಾಜಯ್ಯ, ಗ್ರಾ.ಪಂ.ಅಧ್ಯಕ್ಷರಾದ ಆಶಾ ನಟರಾಜು, ಉಪಾಧ್ಯಕ್ಷರಾದ ಈ.ಪಿ.ರವಿ, ಸದಸ್ಯರಾದ ಬಸವರಾಜು (ಕೇಬಲ್‍ರಾಜು), ಸುರೇಶ್, ವೆಂಕಟೇಶಯ್ಯ, ಯೋಗಮಣಿ ಕೃಷ್ಣಮೂರ್ತಿ, ಪಿ.ಡಿ.ಓ. ವೃಷಬೇಂದ್ರಪ್ಪ, ಸಮಿತಿಯ ಟೈಲರ್ ಮಾದೇಶ್, ಬಸವರಾಜು, ಕೃಷ್ಣಮೂರ್ತಿ, ಗೋವಿಂದರಾಜು, ದೇವರಾಜು, ಪುಟ್ಟಲಕ್ಷ್ಮಮ್ಮ, ವೈರಮುಡಿ ಹಾಗೂ ಇನ್ನಿತರ ಮುಖಂಡರು ಹಾಜರಿದ್ದರು.

Related Articles

Leave a comment

Back to Top

© 2015 - 2017. All Rights Reserved.