ಯದುವಂಶಕ್ಕೆ ಹೊಸ ಅತಿಥಿ ಆಗಮನ: ಗಂಡು ಮಗುವಿಗೆ ಜನ್ಮ ನೀಡಿದ ಯುವರಾಣಿ ತ್ರಿಷಿಕಾ

BREAKING NEWS, Kannada News, Regional, Top News No Comments on ಯದುವಂಶಕ್ಕೆ ಹೊಸ ಅತಿಥಿ ಆಗಮನ: ಗಂಡು ಮಗುವಿಗೆ ಜನ್ಮ ನೀಡಿದ ಯುವರಾಣಿ ತ್ರಿಷಿಕಾ 56

ಮೈಸೂರು: ಮೈಸೂರು ಯದುವಂಶಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಮೈಸೂರಿನ ಮಹಾರಾಣಿ ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬೆಂಗಳೂರಿನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅಂಬಾವಿಲಾಸ ಅರಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಇನ್ನು ಯದುವೀರ್ ಕೃಷ್ಣದತ್ತ ಒಡೆಯರ್ ಅವರು ತಂದೆಯಾದ ಖುಷಿಯಲ್ಲಿದ್ದಾರೆ.

ತ್ರಿಷಿಕಾ ಕುಮಾರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಂಸ್ಥಾನದ ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​​ ಪತ್ನಿಯಾಗಿರುವ ತ್ರಿಷಿಕಾ ರಾಜಸ್ಥಾನದ ದುರ್ಗಪುರದ ರಾಜವಂಶಸ್ಥರ ಕುಟುಂಬಕ್ಕೆ ಸೇರಿದವರಾಗಿದ್ದು, ಗರ್ಭಿಣಿ ಆದಾಗಿನಿಂದಲೂ ಬೆಂಗಳೂರಿನ ಇಂದಿರಾನಗರದಲ್ಲಿರುವ ತಾಯಿ ಮನೆಯಲ್ಲಿ ತಾಯಿಯ ಆರೈಕೆಯಲ್ಲಿದ್ದರು.

ಇಂದಿರಾನಗರದಲ್ಲಿರುವ ಕ್ಲೌಡ್ ಮೈಮ್​ ಮೆಟರ್ನಿಟಿ ಹಾಸ್ಪಿಟಲ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಈವತ್ತು ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು ಸಂಜೆ ಅಥವಾ ರಾತ್ರಿ ಯಾವುದೇ ಸಂದರ್ಭದಲ್ಲಿ ಹೆರಿಗೆಯಾಗುವ ಲಕ್ಷಣಗಳಿಗೆ ಎಂದು ವೈದ್ಯರು ತಿಳಿಸಿದ್ದರು. ಶ್ರೀಕಂಠದತ್ತರ ಬಳಿಕ ಸಂತಾನ ಭಾಗ್ಯದ ಕೊರತೆ ಎದುರಿಸುತ್ತಿದ್ದ ಯದುವಂಶದಲ್ಲಿ ಸಂಭ್ರಮ ಮನೆ ಮಾಡಿದೆ. ತ್ರಿಷಿಕಾ ಅವರು ಮುದ್ದಾದ ಪುಟ್ಟ ರಾಜಕುಮಾರನಿಗೆ ಜನ್ಮ ನೀಡಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.