ಮೂರು ಬೆಂಜ್ ಕಾರು ಖರೀದಿಸಿದ ಯಶ್: ಯಾರಿಗೆ ಯಾವ ಕಾರು ಗೊತ್ತಾ..!

BREAKING NEWS, Entertainment, Kannada News No Comments on ಮೂರು ಬೆಂಜ್ ಕಾರು ಖರೀದಿಸಿದ ಯಶ್: ಯಾರಿಗೆ ಯಾವ ಕಾರು ಗೊತ್ತಾ..! 12

ಬೆಂಗಳೂರು: ಸ್ಯಾಂಡಲ್’ಹುಡ್ ಜೋಡಿ ಯಶ್-ರಾಧಿಕಾ ದಂಪತಿಗೆ ಮೊದಲ ಮದುವೆ ವಾರ್ಷಿಕೋತ್ಸವ ಡಿಸೆಂಬರ್ 9ಕ್ಕೆ ನಡೆಯಲಿದ್ದು ನಟ ಯಶ್ ಮೂರು ಬೆಂಜ್ ಕಾರುಗಳನ್ನು ಖರೀದಿಸಿದ್ದಾರೆ.

ಬೆಂಗಳೂರಿನ ಶೋರೂಂಗೆ ಬುಧವಾರದಂದು ಭೇಟಿ ನೀಡಿದ ಯಶ್ ಮೂರು ಟಾಪ್ ಎಂಡ್ ಮಾಡಲ್ ಕಾರು ಖರೀದಿ ಮಾಡಿದ್ದಾರೆ. ಬೆಂಜ್ ಜಿಎಲ್‍ಸಿ, ಬೆಂಜ್ ಇ ಕ್ಲಾಸ್, ಬೆಂಜ್ ಬಿಎಲ್‍ಸಿ ಎಎಂಜಿ ಕಾರುಗಳನ್ನು ಇಷ್ಟಪಟ್ಟು ಖರೀದಿಸಿದ್ದಾರೆ. ಬೆಂಜ್ ಇ ಕ್ಲಾಸ್ ಕಾರು ಅಪ್ಪ-ಅಮ್ಮನಿಗೆ, ಬೆಂಜ್ ಜಿಎಲ್‍ಸಿ ಪತ್ನಿ ರಾಧಿಕಾಗೆ ಹಾಗೂ ಬೆಂಜ್ ಬಿಎಲ್‍ಸಿ ಎಎಂಜಿ ಕಾರನ್ನು ತಮಗಾಗಿ ರಾಕಿಂಗ್ ಸ್ಟಾರ್ ಯಶ್ ಖರೀದಿಸಿದ್ದಾರೆ.

ಅಲ್ಲದೆ ಒಂದೇ ಶೋರೂಮಿನಲ್ಲಿ ಮೂರು ಕಾರ್ ಖರೀದಿಸಿದ ಮೊದಲಿಗರು ಯಶ್ ಆಗಿದ್ದಾರೆ. ಕಾರುಗಳಿಗೆ ನಿರ್ದಿಷ್ಟವಾಗಿ ಎಷ್ಟು ಖರ್ಚಾಗಿದೆ ಎಂದು ತಿಳಿದುಬಂದಿಲ್ಲ. ಆದರೆ ಮಾರುಕಟ್ಟೆ ಮೌಲ್ಯದ ಪ್ರಕಾರ ಬೆಂಜ್ ಇ ಕ್ಲಾಸ್ ಕಾರು 77 ಲಕ್ಷ ರೂ., ಬೆಂಜ್ ಜಿಎಲ್‍ಎಸ್ ಕಾರು 1.10 ಕೋಟಿ ರೂ. ಹಾಗೂ ಬೆಂಜ್ ಜಿಎಸ್‍ಸಿ ಎಎಮ್‍ಜಿ ಕಾರು 92 ಲಕ್ಷ ರೂ. ಬೆಲೆಯದ್ದಾಗಿದೆ.

ಮೊದಲ ವಾರ್ಷಿಕೋತ್ಸವ ಆಚರಿಸಲು ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಪ್ರತಿದಿನ ಗುಡ್ ನ್ಯೂಸ್ ಕೊಡಲು ಆರಂಭಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.