ಒತ್ತುವರಿ ತೆರೆವುಗೊಳಿಸಲು ರೈತನಿಂದ ಅಹೋರಾತ್ರಿ ಪ್ರತಿಭಟನೆ

Kannada News, Regional No Comments on ಒತ್ತುವರಿ ತೆರೆವುಗೊಳಿಸಲು ರೈತನಿಂದ ಅಹೋರಾತ್ರಿ ಪ್ರತಿಭಟನೆ 3

ಮಂಡ್ಯ: ತಮ್ಮ ಜಮೀನು ಬಳಿಯ ನಾಲೆ ಒತ್ತುವರಿಯಾಗಿದ್ದು ತೆರವುಗೊಳಿಸಬೇಕೆಂದು ಆಗ್ರಹಿಸಿ ರೈತನೊಬ್ಬ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ತಾಲೂಕಿನ ದರಸಗುಪ್ಪೆಯ ರೈತ ಪ್ರಭಾಕರ್ ಎಂಬುವವರೇ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಅಹೋ ರಾತ್ರಿ ಧರಣಿ ನಡೆಸಿದ್ದಾರೆ. ತಮ್ಮ ಜಮೀನು ಬಳಿಯ ನಾಲೆ ಏರಿಯನ್ನು ಒತ್ತುವರಿ ಮಾಡಲಾಗಿದೆ. ಈ ಕೂಡಲೇ ಅದನ್ನು ತೆರುವುಗೊಳಿಸಬೇಕು, ಈ ಹಿಂದೆ ಧರಣಿ ನಡೆಸದಾಗ ಅಧಿಕಾರಿಗಳು ತೆರವುಗೊಳಿಸುವ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ 20 ದಿನ ಕಳೆದರೂ ಅಧಿಕಾರಿಗಳು ಕೊಟ್ಟ ಮಾತಿನಂತೆ ನಡೆದುಕೊಂಡಿರಲಿಲ್ಲ. ಹೀಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇನೆ ಎಂದು ಧರಣಿ ನಿರತ ರೈತ ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.