ದಲಿತರ ಕಗ್ಗತ್ತಲನ್ನು ನೆನಪಿಸಿದ ವಿದ್ಯುಚ್ಛಕ್ತಿ: ಪ್ರೊ ಜೆ. ಸೋಮಶೇಖರ್

Kannada News, Regional No Comments on ದಲಿತರ ಕಗ್ಗತ್ತಲನ್ನು ನೆನಪಿಸಿದ ವಿದ್ಯುಚ್ಛಕ್ತಿ: ಪ್ರೊ ಜೆ. ಸೋಮಶೇಖರ್ 12

ಮೈಸೂರು: ಜಗತ್ತಿಗೆ ವಿಶ್ವಜ್ಯೋತಿ, 193 ರಾಷ್ಟ್ರಗಳಿಗೂ ವಿಶ್ವಜ್ಞಾನಿ ಎಂದೂ ಗುರುತಿಸಿಕೊಂಡವರು ಡಾ. ಬಿ. ಆರ್. ಅಂಬೇಡ್ಕರ್. ದಲಿತರು ಕಗ್ಗತ್ತಲಿನಲ್ಲಿ ಇದ್ದಾರೆ ಎಂದು ಈಗೀನ ವಿದ್ಯುಚ್ಛಕ್ತಿ ತೋರಿಸುತ್ತಿದೆ ಎಂದು ಕುಲಸಚಿವರಾದ ಪ್ರೊ. ಜೆ. ಸೋಮಶೇಖರ್ ಹೇಳಿದರು.

ದಲಿತ ಒಕ್ಕೂಟ ಮೈಸೂರು ವಿಶ್ವ ವಿದ್ಯಾಲಯದ ವತಿಯಿಂದ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ 61ನೇ ಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಗೀತಗಾಯನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮೇಣದ ಬತ್ತಿ ಹಚ್ಚುವುದರ ಮೂಲಕ ಉದ್ಘಾಟಿಸಿ ಉಪನ್ಯಾಸ ನೀಡಿ ಮಾತನಾಡಿದ ಅವರು ಇಂದು ಒಬ್ಬರ ಮೇಲೊಬ್ಬರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಉನ್ನತ ಶಿಕ್ಷಣದಲ್ಲಿ ದೋಷವಿದೆಯೋ ಅಥವಾ ನಮ್ಮ ಕಲಿಕೆಯಲ್ಲಿ ದೋಷವಿದೆಯೋ ಎಂದರು. ನಂತರ ಡಾ. ಅಂಬೇಡ್ಕರ್ ಬರವಣಿಗೆ ರಾಷ್ಟ್ರದ ಸಂಪತ್ತು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿಯ ಕುಲಸಚಿವರಾದ ಡಿ. ಭಾರತಿ, ವಿಶ್ರಾಂತ ಪ್ರಭಾರ ಕುಲಪತಿಗಳಾದ ದಯಾನಂದ ಮಾನೆ, ಆಡಳಿತಾಧಿಕಾರಿಗಳಾದ ಸಿ. ಕೆ. ಶ್ರೀನಿವಾಸ್ ಹಾಗೂ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.

ವರದಿ: ಶ್ವೇತಾ, ಜಿ

Related Articles

Leave a comment

Back to Top

© 2015 - 2017. All Rights Reserved.