ಪತ್ರಿಕೆಗಳು ಇಂದಿಗೂ ಟಿವಿಗಿಂತ ಮುಂದಿವೆ: ರವಿ ಹೆಗಡೆ

Kannada News, Regional No Comments on ಪತ್ರಿಕೆಗಳು ಇಂದಿಗೂ ಟಿವಿಗಿಂತ ಮುಂದಿವೆ: ರವಿ ಹೆಗಡೆ 15

ಮೈಸೂರು: ನಮ್ಮ ಭಾರತದಲ್ಲಿ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ, ಡಿಜಿಟಲೈಸ್ ಆಗಬೇಕು ಎಂಬ ಪರಿಸ್ಥಿತಿ ಮಾಧ್ಯಮದವರಿಗೂ ಬಂದಿದೆ, ಇದು ಹೇಗೆಂದರೆ ಒಂದು ದೊಡ್ಡ ಮರ ಬೆಳೆಸಿ, ಅದರ ತುದಿಯಲ್ಲಿ ನಿಂತು ಬುಡ ಕಡಿಯುವಂತಾಗಿದೆ ಮಾಧ್ಯಮದವರದು. ಪತ್ರಿಕೆಗಳು ಇಂದಿಗೂ ಟಿವಿಗಿಂತ ಮುಂದಿವೆ. ಒಂದು ಮಾಧ್ಯಮದವರು ಯಾವಾಗಲು ಇನ್ನೊಂದು ಮಾಧ್ಯಮಕ್ಕಿಂತ ಮುಂದೆ ಇರಬೇಕು, ಆಗ ಮಾತ್ರ ಸ್ಪರ್ಧೆ ಏರ್ಪಡಲು ಸಾಧ್ಯ ಎಂದು ಸಂಪಾದಕರು ಕನ್ನಡ ಪ್ರಭ ಮತ್ತು ಸುವರ್ಣ ಟಿವಿ 24×7ನ ರವಿ ಹೆಗಡೆ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ಹಿರಿಯ ಪತ್ರಕರ್ತರಾದ ದಿ. ಶ್ರೀ ರಾಜಶೇಖರ್ ಕೋಟಿ ಅವರ ಸ್ಮರಣಾರ್ಥ “ಸಾಮಾಜಿಕ ಜಾಲತಾಣಗಳು ಸಣ್ಣ ಪತ್ರಿಕೆಗಳ ಮೇಲೆ ಉಂಟು ಮಾಡಿರುವ ಪರಿಣಾಮ, ಸವಾಲುಗಳು” ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸುದ್ಧಿ ಬಿಡುಗಡೆ ಪತ್ರಿಕೆಯ ಸಂಪಾದಕರಾದ ಡಾ. ಯು. ಪಿ. ಶಿವಾನಂದ ಅವರು ಮಾತನಾಡಿ ಸಮುದಾಯ ಪತ್ರಿಕೆಗಳು ತುಂಬಾ ಅವಶ್ಯಕ, ಯಾವುದೊ ಮೂಲೆಯಲ್ಲಿ ನಡೆಯುವ ವಿಷಯಕ್ಕಿಂತ ನಮ್ಮ ಸುತ್ತಮುತ್ತ ನಡೆಯುವ ವಿಷಯಗಳೇ ಹೆಚ್ಚು ಪ್ರಭಾವ ಬೀರುತ್ತವೆ , ಸಮುದಾಯದ ಪತ್ರಿಕೆಗೆ ಒಬ್ಬ ಚಹಾ ಮಾಡುವವರು, ಅಥವಾ ಒಬ್ಬ ಪೊಸ್ಟ್ ಮೆನ್ ಕೂಡ ವರದಿಗಾರನಾಗಬಹುದು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಎಂ. ಸಿದ್ದರಾಜು, ದಿ ನ್ಯೂಸ್ ಇಂಡಿಯನ್ ಎಕ್ಸಪ್ರೆಸ್ ನ ಬ್ಯೂರೊ ಚೀಫ್ ಆದ ಕೆ. ಶಿವಕುಮಾರ್, ಆಂದೋಲನ ಪತ್ರಿಕೆಯ ಸಂಪಾದಕರಾದ ರವಿಕೋಟಿ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಸಂಪಾದಕರಾದ ಕೆ. ಬಿ. ಗಣಪತಿಯವರು ಉಪಸ್ಥಿತರಿದ್ದರು.

ವರದಿ: ಶ್ವೇತಾ ಜಿ

Related Articles

Leave a comment

Back to Top

© 2015 - 2017. All Rights Reserved.