ಅನನ್ಯ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿಗಳ ಪಟ್ಟಿಗೆ ಕುಂಭಮೇಳದ ಹೆಸರು ಸೇರಿಸಿದ ಯುನೆಸ್ಕೊ

International, Kannada News, National, Top News No Comments on ಅನನ್ಯ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿಗಳ ಪಟ್ಟಿಗೆ ಕುಂಭಮೇಳದ ಹೆಸರು ಸೇರಿಸಿದ ಯುನೆಸ್ಕೊ 15

ಹೊಸದಿಲ್ಲಿ: ಲೋಕಹಿತಾಸಕ್ತಿಯ ಅನನ್ಯ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿಗಳ ಪಟ್ಟಿಯಲ್ಲಿ ಯುನೆಸ್ಕೊ ಕುಂಭಮೇಳದ ಹೆಸರು ಸೇರಿಸಿದೆ.

ಅನನ್ಯ ಸಾಂಸ್ಕೃತಿಕ ಪರಂಪರೆಯ ರಕ್ಷಣೆಯ ಹೊಣೆ ಹೊತ್ತಿರುವ ವಿಶ್ವಸಂಸ್ಥೆ ಅಧೀನದ ಅಂತರಸರಕಾರಿ ಸಮಿತಿಯು(UNESCO) ಇದೀಗ ದಕ್ಷಿಣ ಕೊರಿಯಾದ ಜೆಜುವಿನಲ್ಲಿ ನಡೆಯುತ್ತಿರುವ 12ನೇ ಸಭೆಯ ವೇಳೆ, ಭಾರತದ ಕುಂಭ ಮೇಳ ‘ಲೋಕಹಿತಾಸಕ್ತಿಯ ಅನನ್ಯ ಸಾಂಸ್ಕೃತಿಕ ಪರಂಪರೆ’ ಎಂದು ಟ್ವೀಟ್‌ ಮಾಡಿದೆ.

ಈ ಸೋಮವಾರ ಆರಂಭಗೊಂಡಿರುವ ಜೆಜು ಸಭೆ ಡಿಸೆಂಬರ್‌ 9ರಂದು ಮುಕ್ತಾಯಗೊಳ್ಳಲಿದೆ. ವಿಶ್ವದ ಅತಿ ದೊಡ್ಡ ಧಾರ್ಮಿಕ ಯಾತ್ರಿಗಳ ಸಮಾಗಮ ಎಂದು ಪರಿಗಣಿಸಲ್ಪಡುವ ಕುಂಭಮೇಳ ಇದೀಗ ಬೋಟ್ವಾನಾ, ಕೊಲಂಬಿಯಾ, ವೆನಿಜುವೆಲಾ, ಮೊಂಗೋಲಿಯಾ, ಮೊರೊಕ್ಕೊ, ಟರ್ಕಿ ಹಾಗೂ ಯುಎಇ ಜತೆ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.

Related Articles

Leave a comment

Back to Top

© 2015 - 2017. All Rights Reserved.