ಕನ್ನಡ ಚಿತ್ರರಂಗಕ್ಕೆ ಸರ್ಜಾ ಫ್ಯಾಮಿಲಿಯ ಮತ್ತೊಂದು ಕುಡಿ ಎಂಟ್ರಿ

BREAKING NEWS, Entertainment, Kannada News No Comments on ಕನ್ನಡ ಚಿತ್ರರಂಗಕ್ಕೆ ಸರ್ಜಾ ಫ್ಯಾಮಿಲಿಯ ಮತ್ತೊಂದು ಕುಡಿ ಎಂಟ್ರಿ 17

ಸಿನಿಮಾ: ಕನ್ನಡ ಚಿತ್ರರಂಗದಲ್ಲಿ ಈಗಾಗಲೆ ಮೂವರು ಸರ್ಜಾ ಗಳು ಅಭಿನಯಿಸುತ್ತಿದ್ದಾರೆ. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾರ ಸಾಲಿಗೆ ಇದೀಗ ಸರ್ಜಾ ಫ್ಯಾಮಿಲಿಯ ಮತ್ತೊಂದು ಕುಡಿ ಸಿನಿಮಾರಂಗಕ್ಕೆ ಎಂಟ್ರಿಯಾಗಿದ್ದಾರೆ.

ಹೌದು ಧ್ರುವ ಬಳಿಕ ಅರ್ಜುನ್ ಸರ್ಜಾ ಅವರ ಸಂಬಂಧಿ ಪವನ್ ತೇಜ್ ಈಗ ಸಿನಿಮಾ ಮಾಡುತ್ತಿದ್ದಾರೆ. ಸಂಬಂಧದಲ್ಲಿ ಅರ್ಜುನ್ ಸರ್ಜಾ ಪವನ್ ಅವರಿಗೆ ಸೋದರ ಮಾವರಾಗಬೇಕು. ‘ಅಥರ್ವ’ ಸಿನಿಮಾದ ಮೂಲಕ ಪವನ್ ತೇಜ್ ತಮ್ಮ ಸಿನಿಜರ್ನಿ ಆರಂಭಿಸುತ್ತಿದ್ದಾರೆ.

ಪವನ್ ತೇಜ್ ಈಗಾಗಲೇ ಸಿನಿಮಾಗೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಅನೇಕ ನಾಟಕಗಳನ್ನು ಮಾಡಿ ನಟನೆಯ ಅನುಭವನ್ನು ಪಡೆದುಕೊಂಡಿದ್ದಾರೆ. ಇನ್ನು ತಮ್ಮ ಮೊದಲ ಸಿನಿಮಾವನ್ನು ಆಕ್ಷನ್ ಚಿತ್ರವಾಗಿ ಪವನ್ ಆಯ್ಕೆ ಮಾಡಿದ್ದಾರೆ. ಅರುಣ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಅಥರ್ವ’ ಎಂದರೆ ನರಸಿಂಹನ ಇನ್ನೊಂದು ಹೆಸರಂತೆ. ಸದ್ಯ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಆಡಿಯೋ ರಿಲೀಸ್ ಆಗಲಿದೆಯಂತೆ.

Related Articles

Leave a comment

Back to Top

© 2015 - 2017. All Rights Reserved.