ರಾಮಸೇತು ಬಗ್ಗೆ ಸಿಹಿ ಸುದ್ದಿ ನೀಡಿದ ಅಮೇರಿಕಾ ವಿಜ್ಞಾನಿಗಳು: ಇಂದು ಪ್ರಸಾರವಾಗಲಿದೆ ಇದರ ಕಾರ್ಯಕ್ರಮ

BREAKING NEWS, Kannada News, National, Top News No Comments on ರಾಮಸೇತು ಬಗ್ಗೆ ಸಿಹಿ ಸುದ್ದಿ ನೀಡಿದ ಅಮೇರಿಕಾ ವಿಜ್ಞಾನಿಗಳು: ಇಂದು ಪ್ರಸಾರವಾಗಲಿದೆ ಇದರ ಕಾರ್ಯಕ್ರಮ 52

ನವದೆಹಲಿ: ರಾಮಸೇತುವಿನ ಅಸ್ತಿತ್ವದ ಕುರಿತ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸದ್ಯ ಭಾರತ ಮತ್ತು ಶ್ರೀಲಂಕಾ ಸಂಪರ್ಕಿಸುವ ರಾಮಸೇತು ನೈಸರ್ಗಿಕವಾಗಿ ಸೃಷ್ಟಿಯಾದುಗಿದ್ದಲ್ಲ, ಮಾನವ ನಿರ್ಮಿತವೆಂದು ಅಮೆರಿಕದ ವಿಜ್ಞಾನಿಗಳು ಹೇಳಿದ್ದಾರೆ.

ಈ ಬಗ್ಗೆ ಅಮೆರಿಕದ ಡಿಸ್ಕವರಿ ಕಮ್ಯುನಿ ಕೇಷನ್‌ನ ಸೈನ್ಸ್‌ ಚಾನೆಲ್‌ ಸಾಕ್ಷ್ಯ ಚಿತ್ರವೊಂದನ್ನು ತಯಾರಿದೆ. ಇದರಲ್ಲಿ ರಾಮಸೇತುವಿನ ಅಸ್ತಿತ್ವದ ಕುರಿತಂತೆ ವೈಜ್ಞಾನಿಕ ಉತ್ತರ ಗಳನ್ನು ಪಡೆಯಲಾಗಿದೆ. ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗ ಸೇತುವೆ ಅಸ್ತಿತ್ವದಲ್ಲಿರುವ ಸಾಧ್ಯತೆಯಿದೆ ಎಂದು ಹೇಳಿದೆ.

ನಾಸಾದ ಫೋಟೋಗಳನ್ನ ಉದಾಹರಣೆಯಾಗಿ ನೀಡಿ 50 ಕಿ.ಮೀ ಉದ್ದದ ಈ ಸೇತುವೆ ಮಾನವ ನಿರ್ಮಿತವಾದುದು ಎಂದು ಕಾರ್ಯಕ್ರಮದಲ್ಲಿ ಅಮೆರಿಕದ ಪುರಾತತ್ವಶಾಸ್ತ್ರಜ್ಞರು ಹೇಳಿದ್ದಾರೆ.

ಸೇತುವೆ ಮಾನವ ನಿರ್ಮಿತವೇ ಎಂಬ ಬಗ್ಗೆ ಹಿಂದಿನಿಂದಲೂ ವಾದ ವಿವಾದಗಳಿವೆ. ಇಲ್ಲಿನ ಮರಳಿನ ಪಟ್ಟಿ ನೈಸರ್ಗಿಕ. ಆದರೆ ಇದರ ಕೆಳಗಿರುವ ಸಾಮಗ್ರಿ ನೈಸರ್ಗಿಕವಲ್ಲ ಎಂದು ಸಾಕ್ಷ್ಯಚಿತ್ರದ ಪ್ರೋಮೋದಲ್ಲಿ ನಿರೂಪಕರು ಹೇಳುತ್ತಾರೆ. ಅಷ್ಟೇ ಅಲ್ಲ, ಇಲ್ಲಿನ ಮರಳಿನ ಪಟ್ಟಿಯ ಕೆಳಗಿರುವ ಕಲ್ಲುಗಳು 7 ಸಾವಿರ ವರ್ಷಗಳ ಹಿಂದಿನದು ಮತ್ತು ಇತರ ಪ್ರದೇಶದಲ್ಲಿನ ಮರಳಿನ ಪಟ್ಟಿ ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದು ಎಂದು ಸೌತರ್ನ್ ಆರೆಗಾನ್‌ ಯೂನಿವರ್ಸಿಟಿ ವಿಜ್ಞಾನಿ ಚೆಲ್ಸಿಯಾ ರೋಸ್‌ ಹೇಳಿದ್ದಾರೆ.

ಸೈನ್ಸ್ ಚಾನೆಲ್ ಈ ಕಾರ್ಯಕ್ರಮದ ಪ್ರೋಮೋವನ್ನ ತನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಈ ಸೇತುವೆ ನೈಸರ್ಗಿಕವಾಗಿ ನಿರ್ಮಾಣವಾಗಿಲ್ಲ. ಇದು ಮಾನವ ನಿರ್ಮಿತ ಎಂದು ಹೇಳಿದೆ. ಬುಧವಾರ ಅಂದರೆ ಇಂದು ರಾತ್ರಿ 7.30ಕ್ಕೆ ಡಿಸ್ಕವರಿ ಕಮ್ಯುನಿಕೇಷನ್ಸ್ ಮಾಲೀಕಕತ್ವದ ಅಮೆರಿಕದ ಸೈನ್ಸ್ ಚಾನೆಲ್‍ನಲ್ಲಿ “ಏನ್ಶಿಯಂಟ್ ಲ್ಯಾಂಡ್ ಬ್ರಿಡ್ಜ್” ಎಂಬ ಕಾರ್ಯಕ್ರಮ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದ ಪ್ರೋಮೋ

https://twitter.com/ScienceChannel/status/940259901166600194

Related Articles

Leave a comment

Back to Top

© 2015 - 2017. All Rights Reserved.