ಲೈಂಗಿಕ ಕಿರುಕುಳ ಆರೋಪ: ಟ್ರಂಪ್ ವಿರುದ್ಧ ತನಿಖೆ ನಡೆಸುವಂತೆ ಮಹಿಳಾ ಸಂಸದರಿಂದ ಒತ್ತಾಯ

International, Kannada News No Comments on ಲೈಂಗಿಕ ಕಿರುಕುಳ ಆರೋಪ: ಟ್ರಂಪ್ ವಿರುದ್ಧ ತನಿಖೆ ನಡೆಸುವಂತೆ ಮಹಿಳಾ ಸಂಸದರಿಂದ ಒತ್ತಾಯ 15

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಡೆಮಾಕ್ರಟಿಕ್ ಮಹಿಳಾ ಸಂಸದರು ಒತ್ತಾಯಿಸಿದ್ದಾರೆ.

ಆರೋಪಗಳ ಕುರಿತ ತನಿಖೆ ಈಗಾಗಲೇ ವಿಳಂಬವಾಗಿದೆ. ಮೇಲ್ವಿಚಾರಣೆ ಮತ್ತು ಸರ್ಕಾರಿ ಸುಧಾರಣೆಗಳ ಸಮಿತಿಯ ಸದಸ್ಯರು ಮತ್ತು ಅಧ್ಯಕ್ಷರಿಗೆ ಈ ಸಂಬಂಧ 54 ಸಂಸದೆಯರು ಸಹಿ ಮಾಡಿದ ಪತ್ರ ರವಾನಿಸಲಾಗಿದೆ.

ಅಮೆರಿಕದಾದ್ಯಂತ ಮಹಿಳೆಯರು ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳಗಳ ಕುರಿತು ಬಹಿರಂಗವಾಗಿ ಹೇಳಿಕೊಳ್ಳುತ್ತಿರುವ ‘ಮೀ ಟೂ’ ಚಳವಳಿ ಕುರಿತಂತೆ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.