ಮಹದಾಯಿ ಹೋರಾಟಗಾರರೊಂದಿಗೆ ಹೆಚ್.ಡಿ.ಡಿ ಮಾತುಕತೆ: ಅಪ್ಪಾಜಿ ಕ್ಯಾಂಟೀನ್​’ಮೂಲಕ ಊಟದ ವ್ಯವಸ್ಥೆ

BREAKING NEWS, Kannada News, Regional, Top News No Comments on ಮಹದಾಯಿ ಹೋರಾಟಗಾರರೊಂದಿಗೆ ಹೆಚ್.ಡಿ.ಡಿ ಮಾತುಕತೆ: ಅಪ್ಪಾಜಿ ಕ್ಯಾಂಟೀನ್​’ಮೂಲಕ ಊಟದ ವ್ಯವಸ್ಥೆ 32

ಬೆಂಗಳೂರು: ಮಲ್ಲೇಶ್ವರಂನ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿರುವ ಮಹದಾಯಿ ಹೋರಾಟಗಾರರೊಂದಿಗೆ ಮಾಜಿ ಪ್ರಧಾನಿ ದೇವೇಗೌಡರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ್​ ಸೊಬರದಮಠ ಅವರೊಂದಿಗೆ ಮಾಜಿ ಪ್ರಧಾನಿಗಳು ಮಾತನಾಡಿದ್ದು, ಅನೇಕ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಿರಿ ಈ ವಿಷಯವಾಗಿ ಪ್ರಧಾನಿ ಮೋದಿ ಮೇಲೆ ಒತ್ತಡ ಹೇರಿ. ಪ್ರಧಾನಿಗಳು ಮಧ್ಯಸ್ಥಿಕೆ ವಹಿಸುವಂತೆ ಮಾಡಿ ಎಂದು ಸೊಬರದಮಠ ದೇವೇಗೌಡರನ್ನು ಕೇಳಿಕೊಂಡಿದ್ದಾರೆ.

ಇದಕ್ಕೆ ದೊಡ್ಡಗೌಡರು ಪ್ರತಿಕ್ರಿಯೆಸಿ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಚರ್ಚೆ ನಡೆಸುವುದಾಗಿ ಕೂಡ ಹೇಳಿದ್ದಾರಂತೆ. ಅಲ್ಲದೆ ಅಪ್ಪಾಜಿ ಕ್ಯಾಂಟೀನ್​ ಮೂಲಕ ಪ್ರತಿಭಟನಾಕಾರರಿಗೆ ಊಟದ ವ್ಯವಸ್ಥೆ ಮಾಡಿಸಿದ್ದಾರೆ. 

Related Articles

Leave a comment

Back to Top

© 2015 - 2017. All Rights Reserved.