ಕುಲಭೂಷಣ್​ ಜಾಧವ್​ ಭೇಟಿಯಾದ ತಾಯಿ, ಪತ್ನಿ

BREAKING NEWS, International, Kannada News, Top News No Comments on ಕುಲಭೂಷಣ್​ ಜಾಧವ್​ ಭೇಟಿಯಾದ ತಾಯಿ, ಪತ್ನಿ 10

ಇಸ್ಲಾಮಾಬಾದ್​: ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್​ ಜಾಧವ್​ ಅವರನ್ನು ತಾಯಿ ಮತ್ತು ಪತ್ನಿ ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು.

ಇಸ್ಲಾಮಾಬಾದ್​ನಲ್ಲಿರುವ ಪಾಕ್​ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಇಂದು ಮಧ್ಯಾಹ್ನ 1.35 ಭೇಟಿಗೆ ಅವಕಾಶ ಮಾಡಿಕೊಡಲಾಗಿತ್ತು. ಸುಮಾರು 30 ನಿಮಿಷಗಳ ಕಾಲ ಜಾಧವ್​ ತಾಯಿ ಮತ್ತು ಪತ್ನಿ ಕುಲಭೂಷಣ್​ ಅವರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಪಾಕಿಸ್ತಾನದ ಭಾರತೀಯ ರಾಯಭಾರಿ ಜೆ.ಪಿ.ಸಿಂಗ್​ ಅವರು ಕುಲಭೂಷಣ್​ ಕುಟುಂಬಸ್ಥರೊಂದಿಗಿದ್ದರು. 2016ರ ಮಾರ್ಚ್​ 3 ರಂದು ಕುಲಭೂಷಣ್​ ಅವರನ್ನು ಬಂಧಿಸಿದ ನಂತರ ಇದೇ ಮೊದಲ ಬಾರಿಗೆ ಜಾಧವ್​ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದರು.

ಮೊಹಮ್ಮದ್​ ಅಲಿ ಜಿನ್ನಾ ಅವರ ಹುಟ್ಟಿದ ದಿನದ ಪ್ರಯುಕ್ತ ಮಾನವೀಯತೆಯ ನೆಲೆಗಟ್ಟಿನಲ್ಲಿ ಕುಲಭೂಷಣ್​ ಅವರಿಗೆ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ.

Related Articles

Leave a comment

Back to Top

© 2015 - 2017. All Rights Reserved.