ದುಬಾರಿ ವಾಚ್‌ ಬಳಿಕ ಈಗ ದುಬಾರಿ ಊಟದ ವಿವಾದ: ಸಿಎಂ ಸಿದ್ದರಾಮಯ್ಯರ ಬೆಳ್ಳಿ ತಟ್ಟೆ ಊಟ, 10 ಲಕ್ಷ ಖರ್ಚು..!

Kannada News, Regional No Comments on ದುಬಾರಿ ವಾಚ್‌ ಬಳಿಕ ಈಗ ದುಬಾರಿ ಊಟದ ವಿವಾದ: ಸಿಎಂ ಸಿದ್ದರಾಮಯ್ಯರ ಬೆಳ್ಳಿ ತಟ್ಟೆ ಊಟ, 10 ಲಕ್ಷ ಖರ್ಚು..! 39

ಕಲುಬುರ್ಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ. ಸರಳ ಸಜ್ಜನಿಕೆ ಮುಖ್ಯಮಂತ್ರಿಗಳು ಸಾಧನಾ ಸಮಾವೇಶದ ಹೆಸರಲ್ಲಿ ದರ್ಬಾರ್ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಊಟ ಮಾಡಲು ಬೆಳ್ಳಿ ತಟ್ಟೆ ಬಳಸಿ ಈಗ ಭಾರಿ ಚರ್ಚೆಗೆ ಗುರಿಯಾಗಿದ್ದಾರೆ.

ಕಲಬುರಗಿಯ ಅಫಜಲಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಮಾಲಿಕಯ್ಯ ಗುತ್ತೆದಾರ್ ಬಂಗಾರದ ಕಿರೀಟ ಉಡುಗೊರೆ ನೀಡಿದ್ದರು. ಬಳಿಕ ಕಲಬುರಗಿ ನಗರದ ಐಒನ್ ಶಾಹಿ ಅತಿಥ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಬೆಳ್ಳಿ ತಟ್ಟೆಯಲ್ಲಿ ರಾತ್ರಿ ಊಟವನ್ನ ಮಾಡಿದ್ದಾರೆ ಎನ್ನಲಾಗಿದೆ. ಆ ಒಂದು ರಾತ್ರಿ ಊಟಕ್ಕೆ 10 ಲಕ್ಷ ಖರ್ಚು ಮಾಡಲಾಗಿದಿಯಂತೆ. ಸಮಾಜವಾದಿ ಮುಖ್ಯಮಂತ್ರಿಯ ಐಷಾರಾಮಿ ಜೀವನ ಎಂಬ ಚರ್ಚೆ ಶುರುವಾಗಿದ್ದು, ದುಬಾರಿ ವಾಚ್‌ ಬಳಿಕ ಈಗ ದುಬಾರಿ ಊಟದ ವಿವಾದ ಹುಟ್ಟಿಕೊಂಡಿದೆ.

ಅಂದು ರಾತ್ರಿ ಊಟವನ್ನ ಬೆಳ್ಳಿ ತಟ್ಟೆಯಲ್ಲಿ ಮಾಡಿದ್ದಷ್ಟೆ ಅಲ್ಲದೆ, ರೌಂಡ್ ಟೇಬಲ್ ಮೇಲೆ ಸಲಾಡ್ ಇಟ್ಟಿರುವ ಪ್ಲಾಷ್ಟಿಕ್ ತಟ್ಟೆಯನ್ನ ಹೊರತು ಪಡಿಸಿದರೆ ಇನ್ನೂಳಿದಂತೆ ಚಮಚ, ಗ್ಲಾಸ್, ಸ್ವೀಟ್ ಹಾಕುವ ಪುಟ್ಟ ಪುಟ್ಟ ಗ್ಲಾಸ್(ವಾಟೆ) ಗಳನ್ನ ಇಡಲಾಗಿತ್ತು. ಅದರಲ್ಲಿ ಭರ್ಜರಿ ಭೋಜನವನ್ನ ಸಿಎಂ ಸಿದ್ದರಾಮಯ್ಯ, ಸಚಿವರಾದ ಎಮ್.ಬಿ ಪಾಟೀಲ್, ಪ್ರಿಯಾಂಕ್ ಖರ್ಗೆ ಶಾಸಕ ಅಜಯ್ ಸಿಂಗ್ ಸೇರಿದಂತೆ ಕೆಲವು ಮುಖಂಡರು ಹಾಗೂ ಅಧಿಕಾರಿಗಳು ಸವಿದಿದ್ದಾರೆ ಎನ್ನಲಾಗುತ್ತಿದೆ. ಆಸರೆ ಸಿಎಂ ಅವರಿಗೆ ಭೋರಿ ಬೋಜನ ಮಾಡಿಸಿದ್ದು ಕಾಂಗ್ರೆಸ್ ನ ಮುಖಂಡರೊಬ್ಬರು ಎಂಬುದು ಸದ್ಯ ಕಾಂಗ್ರೆಸ್ ನ ಲೀಡರ್ ಒಬ್ಬರು ಹೇಳಿಕೊಂಡಿದ್ದಾರೆ.

ಅಲ್ಲದೆ ಅಡುಗೆ ಭಟ್ಟರು ಸೇರಿ ಇಡೀ ಟೀಮ್ ಅನ್ನು ಹೈದ್ರಾಬಾದ್ ನಿಂದ ಕರೆಸಲಾಗಿತ್ತು. ಸುಮಾರು 50ಕ್ಕೂ ಅಧಿಕ ಜನರು ಈ ತಂಡದಲ್ಲಿದ್ದರು ಎನ್ನಲಾಗುತ್ತಿದೆ. ಒಂದು ಊಟಕ್ಕೆ ಎಂಟುನೂರು ರೂ ನೀಡಿದ್ದು, ಐದನೂರಕ್ಕಿಂತ ಅಧಿಕ ಊಟದ ಆರ್ಡರ್ ಇವರಿಗೆ ನೀಡಲಾಗಿತ್ತು. ಆದರೆ ಅಂದು ರಾತ್ರಿ ಊಟ ಮಾಡಿದ್ದು ಮಾತ್ರ ಸುಮಾರು ಇನ್ನೂರಕ್ಕೂ ಅಧಿಕ ಜನರು. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಕಾರ್ಯಕರ್ತರು ಸಹ ಊಟ ಮಾಡಿದ್ದರು. ಆದರೆ ಇವರಿಗೆ ಮಾತ್ರ ಪ್ಲಾಸ್ಟಿಕ್ ತಟ್ಟೆಯಲ್ಲಿ ಊಟ ನೀಡಲಾಗಿತ್ತು.

ಲೋಹಿಯಾ ವಾದದ ಕುರಿತು ಮತ್ತ ಇಂದಿರಾ ಕ್ಯಾಂಟಿನ್ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಸದ್ಯ ಸರ್ಕಾರದ ಸಾಧನಾ ಸಮಾವೇಶದ ಹೆಸರಿನಲ್ಲಿ ಐಶಾರಾಮಿ ಯಾತ್ರೆಯನ್ನ ಮಾಡ್ತಾಯಿದಾರಾ ಎಂಬ ಪ್ರಶ್ನೆಗಳು ಕೂಡ ಸದ್ಯ ಕಾಡುತ್ತಿದ್ದು, ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರಿಸಬೇಕಿದೆ.

Related Articles

Leave a comment

Back to Top

© 2015 - 2017. All Rights Reserved.