ಹೊಸ ವರ್ಷಕ್ಕೆ ‘ವಾಟ್ಸ್ ಆ್ಯಪ್’ ಹೊಸ ಶಾಕ್: ಈ ಮೊಬೈಲ್’ಗಳಲ್ಲಿ ಸೇವೆ ಸ್ಥಗಿತ

International, Kannada News, Top News No Comments on ಹೊಸ ವರ್ಷಕ್ಕೆ ‘ವಾಟ್ಸ್ ಆ್ಯಪ್’ ಹೊಸ ಶಾಕ್: ಈ ಮೊಬೈಲ್’ಗಳಲ್ಲಿ ಸೇವೆ ಸ್ಥಗಿತ 43

ಹೊಸದಿಲ್ಲಿ: ಹೊಸ ವರ್ಷಕ್ಕೆ ‘ವಾಟ್ಸ್ ಆ್ಯಪ್’ ಬಳಕೆದಾರರಿಗೆ ಹೊಸ ಆಘಾತ ಕಾದಿದೆ. 2017ರ ಡಿ.31ರಿಂದ ‘ಬ್ಲ್ಯಾಕ್‍ಬೆರಿ 10′ ಮತ್ತು ‘ವಿಂಡೋಸ್ ಫೆÇೀನ್ 8.0’, ‘ಆಂಡ್ರಾಯ್ಡ್ 4.0’ ಮತ್ತು ಅದಕ್ಕಿಂತಲೂ ಹಳೆಯವಾದ ಪ್ಲಾಟ್‍ಫಾರಂಗಳಿಗೆ ಸೇವೆ ಸ್ಥಗಿತಗೊಳಿಸಲು ವಾಟ್ಸ್‍ಆ್ಯಪ್ ನಿರ್ಧರಿಸಿದೆ. ‘ವಾಟ್ಸ್‍ಆ್ಯಪ್’ ಮಾತೃ ಸಂಸ್ಥೆ ‘ಫೇಸ್‍ಬುಕ್’ ಈ ವಿಷಯ ಖಚಿತಪಡಿಸಿದೆ.

ಕಾರಣವೇನು..?

ಈ ಪ್ಲಾಟ್‍ಫಾರಂಗಳಲ್ಲಿ, ಆ್ಯಪ್‍ನ ವೈಶಿಷ್ಟ್ಯಗಳನ್ನು ಹೆಚ್ಚಿಸಲು ಅಗತ್ಯ ಅವಕಾಶಗಳು ಇಲ್ಲವಾದ್ದರಿಂದ, ಈ ನಿರ್ಧಾರ ಕೈಗೊಳ್ಳಲಾಗಿದೆ. “ಹೀಗಾಗಿ ಗ್ರಾಹಕರು ಪರಿಷ್ಕೃತ ವಾಟ್ಸ್ ಆ್ಯಪ್ ಸೇವೆಯನ್ನು ಮುಂದುವರಿಸಬೇಕಾದರೆ ಹೊಸ ‘ಒಎಸ್’ ವರ್ಷನ್‍ಗೆ ಅಪ್‍ಗ್ರೇಡ್ ಆಗಬೇಕು,” ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಅಲ್ಲದೆ, ಮುಂದಿನ ವರ್ಷಾಂತ್ಯದಿಂದ (ಡಿಸೆಂಬರ್ 2018) ‘ನೋಕಿಯಾ ಎಸ್40’ಗೆ ವಾಟ್ಸ್ ಆ್ಯಪ್ ಸಪೆÇೀರ್ಟ್ ಸ್ಥಗಿತಗೊಳಿಸಲಿದೆ. ಫೆ.1, 2020ರ ಬಳಿಕ ‘ಆ್ಯಯಂಡ್ರಾಯ್ಡ್ ವರ್ಷನ್ 2.3.7 ಮತ್ತು ಅದಕ್ಕಿಂತಲೂ ಹಳೆಯ ವರ್ಷನ್ ಇರುವ ಮೊಬೈಲ್‍ಗಳಲ್ಲಿ ವಾಟ್ಸ್ ಆ್ಯಪ್ ಕೆಲಸ ಮಾಡುವುದಿಲ್ಲ.

ಗ್ರಾಹಕರು ಹೊಸ ‘ಒಎಸ್’ ವರ್ಷನ್‍ಗೆ ಅಪ್‍ಗ್ರೇಡ್ ಆಗದಿದ್ದರೆ, ಹಳೆಯ ವಾಟ್ಸ್ ಆ್ಯಪ್ ಬಳಸಬಹುದಾದರೂ, ಸಾಫ್ಟ್‍ವೇರ್ ಅಪ್‍ಡೇಟ್ ಆಗುವುದಿಲ್ಲವಾದ್ದರಿಂದ ಯಾವುದೇ ಹೊಸ ವೈಶಿಷ್ಟ್ಯಗಳು ಅದರಲ್ಲಿ ಲಭಿಸುವುದಿಲ್ಲ. ಜತೆಗೆ ಏನಾದರೂ ಸಮಸ್ಯೆಗಳು ಕಂಡುಬಂದರೂ, ವಾಟ್ಸ್‍ಆ್ಯಪ್ ಸಂಸ್ಥೆ ಅವುಗಳನ್ನು ಸರಿಪಡಿಸುವುದಿಲ್ಲ.

Related Articles

Leave a comment

Back to Top

© 2015 - 2017. All Rights Reserved.