ಮಹದಾಯಿ ಉತ್ತರ ಕರ್ನಾಟಕ ಬಂದ್ ಬೆಂಬಲಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

Kannada News, Regional No Comments on ಮಹದಾಯಿ ಉತ್ತರ ಕರ್ನಾಟಕ ಬಂದ್ ಬೆಂಬಲಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ 26

ಮೈಸೂರು: ಮಹದಾಯಿ ನದಿನೀರು ವಿಚಾರವಾಗಿ ಇಂದು ನೇಯುತ್ತಿರುವ ಉತ್ತರ ಕರ್ನಾಟಕ ಬಂದ್’ಗೆ ಕರ್ನಾಟಕ ಸೇನಾ ಪಡೆ ಬೆಂಬಲಿಸಿ ಪ್ರತಿಭಟನೆ ನಡೆಸಿತು.

ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ನಮಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ಯಡಿಯೂರಪ್ಪ ಅವರು ಬರೀ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಜನರಿಗೆ ಕುಡಿಯಲು ನೀರಿಲ್ಲ. ಕುಡಿಯಲು ನೀರಿಲ್ಲದೆ ಸಾಯುತ್ತಿದ್ದಾರೆ. ಅನಾವಶ್ಯಕವಾಗಿ ಮಹದಾಯಿ ನೀರು ಸಮುದ್ರ ಸೇರುತ್ತಿದೆ. ನಮ್ಮ ರಾಜ್ಯದ ನೆಲ, ಜಲದ ಪರ ನಿಲ್ಲದೆ ಪಕ್ಷದ ರಾಜಕಾರಣ ಮಾಡುತ್ತಿರುವ 28 ಜನ ಸಂಸದರಿಗೆ ನಮ್ಮ ಧಿಕ್ಕಾರ.

ನೆಲ ಜಲ ದ ಪರ ಹೋರಾಡುವ ಗುಣವನ್ನು ನಮ್ಮ ಸಂಸದರು ನಮ್ಮ ನೆರೆಯ ರಾಜ್ಯವಾದ ತಮಿಳುನಾಡಿನಿಂದ ಕಲಿಯಬೇಕು. ಕಳಸ ಬಂಡೂರಿ ಹೋರಾಟ, ಕಾವೇರಿ ಹೋರಾಟ, ಕೃಷ್ಣನದಿ ಹೋರಾಟ , ಬರೀ ಈ ಹೋರಾಟಗಳಲ್ಲೇ ನಮ್ಮ ಕನ್ನಡಿಗರ ಜೀವ ಹೋಗುತ್ತಿದೆ ಎಂದು ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವ ವಹಿಸಿದ್ದರು. ಪ್ರಜೀಶ, ಶಾಂತಮೂರ್ತಿ, ಸಿ ಎಸ್ ನಂಜುಂಡಸ್ವಾಮಿ, ಮನುನಾಯಕ್ ಗುರುಮಲ್ಲಪ್ಪ, ತಿಪ್ಪಯ್ಯ, ಗುರುಶಂಕರ್, ನಾಜೀರ್, ಶಬೀರ್, ಸುನಿಲ್, ಸ್ವಾಮಿ, ನಿತ್ಯಾನಂದ, ರಾಘವೇಂದ್ರ, ರಾಜೇಶ್ ಬಾಬು, ಫಣೀಶ್, ಮೂರ್ತಿ ಹಾಗೂ ಇನ್ನಿತರರು ಇದ್ದರು.

Related Articles

Leave a comment

Back to Top

© 2015 - 2017. All Rights Reserved.