ಕುಲಭೂಷಣ್ ಜಾಧವ್ ತಾಯಿ, ಪತ್ನಿಗೆ ಪಾಕ್ ಮಾದ್ಯಮಗಳಿಂದ ಅವಮಾನ

International, Kannada News No Comments on ಕುಲಭೂಷಣ್ ಜಾಧವ್ ತಾಯಿ, ಪತ್ನಿಗೆ ಪಾಕ್ ಮಾದ್ಯಮಗಳಿಂದ ಅವಮಾನ 25

ಇಸ್ಲಾಮಾಬಾದ್/ನವದೆಹಲಿ: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಅವರ ತಾಯಿ ಮತ್ತು ಪತ್ನಿಗೆ ಇಸ್ಲಾಮಾಬಾದ್‍ನ ಅಧಿಕಾರಿಗಳು ಅವಮಾನ ಮಾಡಿರುವ ಘಟನೆ ಬಗ್ಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಪಾಕ್ ಮಾಧ್ಯಮವೂ ಸಹ ಅವಮಾನ ಮಾಡಿದೆ.

ಜಾಧವ್‍ರನ್ನು ಇಸ್ಲಾಮಾಬಾದ್‍ನಲ್ಲಿ ಭೇಟಿ ಮಾಡಿದ ತಾಯಿ ಆವಂತಿ ಮತ್ತು ಪತ್ನಿ ಚೇತನ್‍ಕುಲ್ ಅವರಿಗೆ ಪಾಕಿಸ್ತಾನ ಮಾಧ್ಯಮದವರು ಕಿರುಕುಳ ನೀಡಿ ಇರಿಸುಮುರಿಸಾಗುವಂಥ ಪ್ರಶ್ನೆಗಳನ್ನು ಕೇಳಿ ಅಪಮಾನ ಮಾಡಿದ್ದಾರೆ. ನಿಮ್ಮ ಪತಿ ಪಾಕಿಸ್ತಾನದ ಸಾವಿರಾರು ಮುಗ್ಧ ಜನರ ಸಾವಿಗೆ ಕಾರಣವಾಗಿದ್ದಾರೆ. ಈ ಬಗ್ಗೆ ನೀವೇನು ಹೇಳುವಿರಿ ಎಂದು ಪಾಕಿಸ್ತಾನ ಪತ್ರಕರ್ತರು ಜಾಧವ್ ಪತ್ನಿಗೆ ಪ್ರಶ್ನೆ ಕೇಳಿ ಅಬ್ಬರಿಸಿದ್ದಾರೆ. ನಿಮ್ಮ ಕೊಲೆಗಡುಕ ಮಗನನ್ನು ಭೇಟಿಯಾದ ಅನುಭವ ಹೇಗಿತ್ತು ಎಂದು ಜಾದವ್ ತಾಯಿ ಆವಂತಿ ಅವರನ್ನು ಪಾಕ್ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿ ಅಪಮಾನ ಮಾಡಿದ್ದಾರೆ.

ನಿರ್ದಯಿ ಪಾಕ್ ಮಾಧ್ಯಮದವರ ಪ್ರಶ್ನೆಗಳಿಂದ ನೊಂದ ತಾಯಿ ಮತ್ತು ಪತ್ನಿ ಮಾನಸಿಕ ಹಿಂಸೆ ಅನುಭವಿಸಿದರು. ಜಾಧವ್ ಭೇಟಿ ವೇಳೆ ಮಂಗಳಸೂತ್ರ, ಕುಂಕುಮ ಮತ್ತು ಬಳೆಗಳನ್ನು ಬಿಚ್ಚಿಸಿ ಇಸ್ಲಾಮಾಬಾದ್ ಅಧಿಕಾರಿಗಳು ಅಪಮಾನ ಮಾಡಿದ್ದ ಬೆನ್ನಲ್ಲೇ ಪಾಕಿಸ್ತಾನದ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದವರು ನೊಂದ ಜೀವಗಳೊಂದಿಗೆ ಸೌಜನ್ಯದಿಂದ ವರ್ತಿಸದೆ ಉದ್ಧಟತನ ತೋರಿರುವ ಬಗ್ಗೆ ಭಾರತದ ಮಾಧ್ಯಮ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Related Articles

Leave a comment

Back to Top

© 2015 - 2017. All Rights Reserved.