ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 3,515 ರೈತರು ಆತ್ಮಹತ್ಯೆ..!

BREAKING NEWS, Kannada News, Regional, Top News No Comments on ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 3,515 ರೈತರು ಆತ್ಮಹತ್ಯೆ..! 26

ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 3,515 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಮಾಹಿತಿ ಹೊರಬಿದ್ದಿದೆ.

ಏಪ್ರಿಲ್ 2013ರಿಂದ ನವೆಂಬರ್ 2017ರವರೆಗೆ ರಾಜ್ಯದಲ್ಲಿ ಒಟ್ಟು 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಪೈಕಿ ಬರ ಮತ್ತು ಬೆಳೆ ನಷ್ಟದಿಂದ ಬರೋಬ್ಬರಿ 2,525 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿಸಿದೆ.

ಏಪ್ರಿಲ್ 2008ರಿಂದ ಏಪ್ರಿಲ್ 2012ರ ವರೆಗೆ 1,125ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಏಪ್ರಿಲ್‌ 2015ರಿಂದ 2017ಏಪ್ರಿಲ್‌ ವರೆಗೆ 2,514ಆತ್ಮಹತ್ಯೆ ಪ್ರಕರಣ ನಡೆದಿದ್ದು, ಅದರಲ್ಲಿ 1,926 ಪ್ರಕರಣಗಳನ್ನು ಕೃಷಿ ಇಲಾಖೆ ಒಪ್ಪಿಕೊಂಡಿದೆ. ಏಪ್ರಿಲ್‌ 2017ರ ನವೆಂಬರ್ 2017ರವರೆಗೆ ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿತ್ತು. ಆದರೂ 624 ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಈ 416 ರೈತರ ಆತ್ಮಹತ್ಯೆಯನ್ನು ಕೃಷಿ ಇಲಾಖೆ ಪರಿಗಣಿಸಿದೆ.112 ಆತ್ಮಹತ್ಯೆ ಪ್ರಕರಣಗಳು ಅನುಮೋದನೆಗಾಗಿ ರಾಜ್ಯ ಸರ್ಕಾರ ಸಮಿತಿಯ ಬಳಿ ಬಾಕಿ ಇವೆ.

ಈ ವರ್ಷದ ನವೆಂಬರ್‌ವರೆಗೆ 105 ಆತ್ಮಹತ್ಯೆ ಪ್ರಕರಣ ಸಮಿತಿಯ ಮುಂದೆ ಅನುಮೋದನೆಗೆ ಬಾಕಿ ಇವೆ. ಕಳೆದ ವರ್ಷದ 7 ಪ್ರಕರಣಗಳಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದು ಕೃಷಿ ಇಲಾಖೆಯ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರ 1ಲಕ್ಷದಿಂದ 5ಲಕ್ಷ ರೂಪಾಯಿ ಪರಿಹಾರಧನ ನೀಡಿದೆ. ಇದರ ಮಧ್ಯೆ ರೈತರು ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ ವಸೂಲಾತಿಗಾಗಿ ಯಾವುದೇ ಒತ್ತಾಯ ಹೇರದಂತೆ ಸೂಚನೆ ಸಹ ನೀಡಿದೆ.

Related Articles

Leave a comment

Back to Top

© 2015 - 2017. All Rights Reserved.