ಫೇಸ್’ಬುಕ್’ಗೆ ಬೇಕಂತೆ ಆಧಾರ್ ಆಧಾರ ..!

BREAKING NEWS, Kannada News, National, Technology No Comments on ಫೇಸ್’ಬುಕ್’ಗೆ ಬೇಕಂತೆ ಆಧಾರ್ ಆಧಾರ ..! 36

ಬೆಂಗಳೂರು: ಸಿಮ್ ಕಾರ್ಡ್, ಪಾನ್ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ ಆಯ್ತು ಇದೀಗ ಫೇಸ್’ಬುಕ್ ನಲ್ಲೂ ಆಧಾರ್ ಬಂದಿದೆ.

ಭಾರತದಲ್ಲಿ ಹೊಸದಾಗಿ ಖಾತೆ ತೆರೆಯುವ ಬಳಕೆದಾರರಿಗೆ ಆಧಾರ್ ನಲ್ಲಿ ನೀವು ಯಾವ ಹೆಸರು ನೀಡಿದ್ದಿರೋ ಆ ಹೆಸರನ್ನೇ ಖಾತೆಗೆ ನೀಡಿ ಎಂದು ಫೇಸ್‍ಬುಕ್ ಹೇಳುತ್ತಿದೆ.

ಹಾಗೆಂದ ಮಾತ್ರಕ್ಕೆ ಆಧಾರ್ ನಲ್ಲಿ ಏನು ಹೆಸರು ನಮೂದಿಸಿದ್ದೀರೋ ಅದೇ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಫೇಸ್‍ಬುಕ್ ಹೇಳಿಲ್ಲ. ಆಧಾರ್ ನಲ್ಲಿರುವ ಹೆಸರನ್ನು ನಮೂದಿಸಿದರೆ ನಿಮ್ಮ ಸ್ನೇಹಿತರಿಗೆ ನಿಮ್ಮನ್ನು ಹುಡುಕಲು ಸುಲಭವಾಗುತ್ತದೆ. ಈ ಕಾರಣಕ್ಕೆ ಆಧಾರ್ ಗೆ ನೀಡಿದ ಹೆಸರನ್ನು ನಮೂದಿಸಿದರೆ ಉತ್ತಮ ಎಂದು ಹೇಳಿದೆ.

ಆಧಾರ್ ಗೆ ನೀಡಿರುವ ಹೆಸರನ್ನು ಮಾತ್ರ ಖಾತೆ ತೆರೆಯುವಾಗ ನಮೂದಿಸಿದರೆ ಸಾಕು. ಆಧಾರ್ ಕಾರ್ಡ್ ಪಡೆಯಲು ನೀಡಬೇಕಾದ ಇತ್ಯಾದಿ ಮಾಹಿತಿಗಳನ್ನು ನೀಡುವ ಅಗತ್ಯವಿಲ್ಲ.

Related Articles

Leave a comment

Back to Top

© 2015 - 2017. All Rights Reserved.