ವಿನಯವಿಲ್ಲದ ಶಿಕ್ಷಣ ಚುಕ್ಕಾಣಿ ಇಲ್ಲದ ಹಡಗಿನಂತೆ: ಪ್ರೊ. ಸಿ ಬಸವರಾಜು

Kannada News, Regional No Comments on ವಿನಯವಿಲ್ಲದ ಶಿಕ್ಷಣ ಚುಕ್ಕಾಣಿ ಇಲ್ಲದ ಹಡಗಿನಂತೆ: ಪ್ರೊ. ಸಿ ಬಸವರಾಜು 34

ಮೈಸೂರು: ಶಿಕ್ಷಣ ಸಮಾನತೆಗೆ ದಾರಿ ತೋರುತ್ತದೆ. ಪ್ರತಿಯೊಬ್ಬರಿಗೂ ಮೌಲ್ಯ ಶಿಕ್ಷಣದ ಅಗತ್ಯವಿದೆ. ವಿನಯ ವಿಲ್ಲದಿದದ್ದರೆ ಶಿಕ್ಷಣಕ್ಕೆ ಮೌಲ್ಯವಿಲ್ಲ. ಹಡಗಿ ಸಾಗಲು ಚುಕ್ಕಾಣಿ ಎಷ್ಟು ಮುಖ್ಯವೋ ಶಿಕ್ಷಣಕ್ಕೆ ವಿನಯವು ಅಷ್ಟೇ ಮುಖ್ಯ ಎಂದು ಮೈಸೂರು ವಿವಿಯ ಪ್ರಭಾರ ಕುಲಪತಿಗಳಾದ ಪ್ರೊ. ಸಿ ಬಸವರಾಜು ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ನಗರದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸುವರ್ಣ ಮಹೋತ್ಸವ ಸಂಭ್ರಮ ಹಾಗೂ 113 ನೇ ಕುವೆಂಪು ಜನ್ಮ ದಿನಾಚರಣೆಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುವೆಂಪು ಅವರ ಪಂಚತಂತ್ರಗಳಾದ ಮನುಜಮತ, ವಿಶ್ವ ಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಠಿ ಇವುಗಳು ಸಮಾಜದ ಬದಲಾವಣೆಗೆ ಅವಶ್ಯಕ. ನಮ್ಮ ಸಮಾಜ ಇನ್ನೂ ಬದಲಾವಣೆಯಾಗಿಲ್ಲ ಕಾರಣ ನಮ್ಮ ಜನತೆ ಗೊಂದಲದಲ್ಲೆ ಇದ್ದಾರೆ. ಮೌಲ್ಯಗಳಿಗೆ ಬೆಲೆ ಕೊಡದಿದ್ದರೆ ನಾವು ಮತ್ತು ಸಮಾಜ ಬೆಳೆಯಲು ಸಾಧ್ಯವಿಲ್ಲ. ಮಾನವ ಹುಟ್ಟುವಾಗ ವಿಶ್ವ ಮಾನವ ಆಗಿ, ಬೆಳೆಯುವಾಗ ಅಲ್ಪಮಾನವನಾಗುತ್ತಾನೆ ಕಾರಣ ಅವನಲ್ಲಿರುವ ಗೊಂದಲಗಳು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೀತಿ ಶ್ರೀಮಂಧರ್ ಕುಮಾರ್, ಖ್ಯಾತ ಜಾನಪದ ವಿದ್ವಾಂಸರಾದ ಪ್ರೊ. ಹಿ. ಶಿ. ರಾಮಚಂದ್ರೇಗೌಡ ಅವರು ಉಪಸ್ಥಿತರಿದ್ದರು.

ವರದಿ: ಶ್ವೇತಾ. ಜಿ

Related Articles

Leave a comment

Back to Top

© 2015 - 2017. All Rights Reserved.