ವಿಜೃಂಭಣೆಯಿಂದ ನಡೆದ ತಾತಾರವರ ಗಣಾರಾಧಾನೆ

Kannada News, Regional No Comments on ವಿಜೃಂಭಣೆಯಿಂದ ನಡೆದ ತಾತಾರವರ ಗಣಾರಾಧಾನೆ 60

ನಂಜನಗೂಡು: ಪವಾಡ ಪುರುಷ ಎಂದೆ ಖ್ಯಾತರಾಗಿರುವ ಶ್ರೀ ಶ್ರೀ ಶ್ರೀ ಸದ್ಗುರು ಮಹಾದೇವ ತಾತಾರವರ 39ನೇ ವರ್ಷದ ಪ್ರಥಮ ಗಣರಾಧನೆಯು ಇಂದು ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಕದಲ್ಲಿ ನೇರವೇರಿತು.

ತಾಲೂಕಿನ, ಹುಲ್ಲಹಳ್ಳಿ ಕಪಿಲ ನದಿಯ ದಡದ ಸಂಗಮ ಕ್ಷೇತ್ರದಲ್ಲಿ ಸ್ಥಳಯುರಿರುವ ಶ್ರೀ ಶ್ರೀ ಶ್ರೀ ಸದ್ಗುರು ಮಹದೇವ ತಾತಾ ರವರು ಹುತಾತ್ಮರಾಗಿ 30 ವರ್ಷಗಳಾಗಿವೇ, ಇದರ ನೆನಪಿಗಾಗಿ ವಾದ್ಯಗೋಷ್ಠಿ, ವೀರಗಾಸೆ ಕಣಿತ, ನಂದಿ ಧ್ವಜ ಕಂಬ, ಹಾಗೂ ಹೂಗಳು, ಬೃಹತ್ ಗತ್ರದ ಬಾವುಟಗಳಿಂದ ಸಿಂಗರಿಸಿದ ರಥದಲ್ಲಿ ತಾತಾರವರ ಮೂರ್ತಿಯನ್ನು ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಲಾಯಿತ್ತು.

ವರ್ಷಕ್ಕೊಮ್ಮೆ ನಡೆಯುವ ಈ ಕಾರ್ಯಕ್ರಮಕ್ಕೆ ಸಾಕ್ಷಿ ಯಾಗಲು ವಿವಿಧ ಕಡೆಯ ಹಳ್ಳಿಗಳಿಂದ ಹಾಗೂ ಕೆರಳ, ತಮಿಳುನಾಡಿನಂದ ಭಕ್ತರ ದಂಡು ತಾತಾರವರ ಗದ್ದಿಗೆಯ ಕಡೆಗೆ ಹರಿದು ಬಂದಿತ್ತು.
ರಥ ನಿಧಾನವಾಗಿ ಚಲಿಸಲಾರಂಭಿಸುತ್ತಿದ್ದಂತಯೇ ಭಕ್ತರ ದಂಡು ನಂದಿ ಕಂಬ ಕುಣಿತ, ವೀರಗಾಸೆ ಕುಣಿತ ನೊಡುತ್ತ, ರಥ ಸಾಗುವ ಬದಿಯಲ್ಲಿ ಕೈಮುಗಿದು ಭಕ್ತಿಯನ್ನು ಮೆರದರು. ಭಕ್ತಾದಿಗಳಿಗೆ ಸುಮಾರು 10 ಕ್ವಿಂಟಾಲ್ ಅಕ್ಕಿ ಯನ್ನು ಬೇಯಿಸಿ ಅನ್ನದ ದಾಸೋಹ ವನ್ನು ಸಹ ಎರ್ಪಡಿಸಲಾಗಿತ್ತು.

ಸದ್ಗುರು ಮಹದೇವ ತಾತಾರವರ ಭಕ್ತಮಂಡಳಿಯ ಅಧ್ಯಕ್ಷ ರು ಹಾಗೂ ಸದಸ್ಯರು, ಹುಲ್ಲಹಳ್ಳಿ ಪೋಲಿಸ್ ಠಾಣೆಯ ಪಿ.ಎಸ್.ಐ ಅಧಿಕಾರಿಯಾದ ರವಿಶಂಕರ್ ಹಾಗೂ ಸಿಬ್ಬಂದಿ ವರ್ಗ ಈ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು.

ವರದಿ: ಕುಮಾರ್ ಹೆಚ್.ಪಿ ಹರದನಹಳ್ಳಿ

Related Articles

Leave a comment

Back to Top

© 2015 - 2017. All Rights Reserved.