ಶನಿ ಸಂತಾನ ಆರ್‌ಎಸ್‌ಎಸ್‌ನ ಕೂಸಾಗಿರುವ ಬಿಜೆಪಿಗೆ ಓಟ್ ಹಾಕಬೇಡಿ ಎಂದ ಜಿಗ್ನೇಶ್ ಮೇವಾನಿ

BREAKING NEWS, Kannada News, Regional, Top News No Comments on ಶನಿ ಸಂತಾನ ಆರ್‌ಎಸ್‌ಎಸ್‌ನ ಕೂಸಾಗಿರುವ ಬಿಜೆಪಿಗೆ ಓಟ್ ಹಾಕಬೇಡಿ ಎಂದ ಜಿಗ್ನೇಶ್ ಮೇವಾನಿ 37

ಚಿಕ್ಕಮಗಳೂರು: ಶನಿ ಸಂತಾನ ಆರ್‌ಎಸ್‌ಎಸ್‌ನ ಕೂಸಾಗಿರುವ ಬಿಜೆಪಿ ವಿರುದ್ಧ 2018ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ಶೇ.95ರಷ್ಟು ಮತ ಚಲಾವಣೆ ಮಾಡಬೇಕು ಎಂದು ಗುಜರಾತ್‌ನ ಯುವ ನಾಯಕ ಜಿಗ್ನೇಶ್‌ ಮೇವಾನಿ ಕರೆ ನೀಡಿದ್ದಾರೆ.

ಶುಕ್ರವಾರ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಕುವೆಂಪು ವೇದಿಕೆಯಲ್ಲಿ ಕೋಮು ಸೌಹಾರ್ದ ವೇದಿಕೆಯ 15ನೇ ವರ್ಷದ ಸಮ್ಮಿಲನ ಸಂಘರ್ಷ ಮತ್ತು ಹಿಂದಣ ನೋಟ ಕಾರ್ಯಕ್ರಮದ ಸಮಾರೋಪವನ್ನು ಉಧ್ಗಾಟಿಸಿ ಮಾತನಾಡಿದ ಅವರು ಏಪ್ರಿಲ್ ನಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತದೆ, ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ ಆದರೆ ನೀವು ಆರ್‌ಎಸ್‌ಎಸ್‌ ವಿರುದ್ದವಾಗಿ ಮತ ಹಾಕಬೇಕು ಎಂದರು.

ನನ್ನ ಪರ ಹಲವಾರು ಹಿತೈಷಿಗಳು ಪ್ರಚಾರ ಮಾಡಿದ್ದಾರೆ. ಕರ್ನಾಟದಲ್ಲಿಯೂ ಈ ರೀತಿ ಪ್ರಯೋಗ ಆಗಬೇಕಾಗಿದೆ. ತಳಮಟ್ಟದಲ್ಲಿ ಹೋರಾಡಿದ ಜನರನ್ನು ವಿಧಾನಸಭೆಗೆ ಕಳುಹಿಸುವ ಅವಶ್ಯಕತೆ ನಮ್ಮಲ್ಲಿ ಇದೆ. ನಮ್ಮಲ್ಲಿ ಹಲವು ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಇದೆ. ಕಾರ್ಮಿಕರ ಮತ್ತು ರೈತರ ಪರ ಧ್ವನಿಗಳು ವಿಧಾನಸೌಧದಲ್ಲಿ ಮೊಳಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಲವ್ ಜಿಹಾದ್, ಗೋಹತ್ಯೆ ವಿಚಾರದಲ್ಲಿ ಸಮಾಜದಲ್ಲಿ ಗಲಭೆ ಉಂಟಾಗುತ್ತಿದೆ. ದಲಿತರ ಮೇಲೆ ಹಲ್ಲೆ ನಡೆಯುತ್ತಿದೆ. ಮೋದಿಯವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಏನಾಗುತ್ತಿದೆ ಎಂದು ನಾವು ನೋಡುತ್ತಿದ್ದೇವೆ. ಕೋಮುವಾದಿ ದೇಶದ ದೊಡ್ಡ ಶತ್ರು ಹಾಗಾಗಿ ನಮ್ಮ ಅತಿದೊಡ್ಡ ಶತ್ರು ಬಿಜೆಪಿ ಆಗಿದೆ ಎಂದು ಜಿಗ್ನೇಶ್‌ ಮೇವಾನಿ ಹೇಳಿದರು.

ನಾನು ಕರ್ನಾಟಕಕ್ಕೆ ಪ್ರಚಾರಕ್ಕೆ ಬಂದರೆ ಯಾರಿಗೇನು ಅನುಕೂಲ ಆಗುತ್ತದೆ ಗೊತ್ತಿಲ್ಲ. ಗೌರಿ ಲಂಕೇಶ್ ಅವರು ನನ್ನ ತಾಯಿ ತರ ಇದ್ದರು. ಗೌರಿ ಲಂಕೇಶ್ ಮತ್ತು ವಿಜಯಪುರದ ಸಂತ್ರಸ್ತ ಹುಡುಗಿಯ ಕುಟುಂಬಕ್ಕೆ ನ್ಯಾಯ ಸಿಗಬೇಕು. ಕಾಂಗ್ರೆಸ್ ಸರ್ಕಾರ ಗಟ್ಟಿತನ ಪ್ರದರ್ಶನ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ಹಾಗಾದಾಗ ಮಾತ್ರ ಗೌರಿ ಲಂಕೇಶ್ ನಿಲುವು ಮತ್ತು ಆಶಯವನ್ನು ಈಡೇರಿಸಬಹುದು ಎಂದು ಗುಜರಾತ್‌ ಶಾಸಕ ಜಿಗ್ನೇಶ್ ಮೇವಾನಿ ಸಮಾರಂಭದಲ್ಲಿ ತಿಳಿಸಿದರು.

Related Articles

Leave a comment

Back to Top

© 2015 - 2017. All Rights Reserved.