ಬೆಳ್ಳಂಬೆಳಗ್ಗೆ ಮಡಿಕೇರಿ ನಗರ ಪ್ರವೇಶಿಸಿದ ಕಾಡಾನೆಗಳು

Kannada News, Regional No Comments on ಬೆಳ್ಳಂಬೆಳಗ್ಗೆ ಮಡಿಕೇರಿ ನಗರ ಪ್ರವೇಶಿಸಿದ ಕಾಡಾನೆಗಳು 21

ಮಡಿಕೇರಿ: ಗ್ರಾಮಗಳಲ್ಲಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ್ದ ಆನೆಗಳು ಇದೀಗ ಮಡಿಕೇರಿ ನಗರಕ್ಕೂ ಪ್ರವೇಶ ನೀಡಿ ಆತಂಕ ಸೃಷ್ಟಿಸಿವೆ. ಮಡಿಕೇರಿ ನಗರದಲ್ಲಿ ಶುಕ್ರವಾರ ಮುಂಜಾನೆ ಸುಮಾರು 5.30ರ ವೇಳೆಗೆ ಕಾಡಾನೆಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿಸಿದವು.

ನಗರದ ಚೈನ್‌ಗೇಟ್‌ ಬಳಿ ಬೆಳ್ಳಂಬೆಳಗ್ಗೆ ದಿಢೀರ್‌ ಎರಡು ಕಾಡಾನೆಗಳು ಕಾಣಿಸಿಕೊಂಡವು. ನಗರದ ಚೈನ್‌ಗೇಟ್‌ ಬಳಿಯಿಂದ ಮೈಸೂರು ರಸ್ತೆಗಿಳಿದ ಕಾಡಾನೆಗಳು, ರಸ್ತೆಗಳಲ್ಲೇ ಅಡ್ಡಾದಿಡ್ಡಿ ಓಡುವ ಮೂಲಕ ಸಾರ್ವಜನಿಕರು ಹಾಗೂ ಪ್ರಯಾಣಿಕರಲ್ಲಿ ಗಾಬರಿಗೊಳಿಸಿದವು. ನಗರದಲ್ಲಿ ಪ್ರವೇಶ ಮಾಡುವ ಮುನ್ನ ರಾಷ್ಟ್ರೀಯ ಹೆದ್ದಾಯಲ್ಲಿ ಗಜಪಡೆ ಪರೇಡ್ ನಡೆಸಿದ್ದು, ನಂತರದಲ್ಲಿ ನಗರದೊಳಗೆ ಲಗ್ಗೆಯಿಟ್ಟಿವೆ. ಮುಂಜಾನೆಯೇ ಕಾಡಿನಿಂದ ನಗರಕ್ಕೆ ನುಗ್ಗಿದ್ದ ಎರಡು ಆನೆಗಳನ್ನು ಕಂಡ ಸಾರ್ವಜನಿಕರು ಜೀವ ಭಯದಿಂದ ಆತಂಕಗೊಂಡರು.

ಇನ್ನು ಆನೆ ಪ್ರವೇಶ ಮಾಡಿರುವ ಬಗ್ಗೆ ಮಾಹಿತಿ ತಿಳಿದು 15 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ, ಆರ್.ಎಫ್.ಓ ವಿಜಯ್ ಕುಮಾರ್ ನೇತೃತ್ವದಲ್ಲಿ ಆನೆಗಳನ್ನು ಕಾಡಿಗಟ್ಟಲು ಹರಸಾಹಸ ಪಟ್ಟರು. ಈ ವೇಳೆ ಆನೆಗಳು ಹೆದ್ದಾರಿಗೆ ಪ್ರವೇಶ ಮಾಡಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಸಮಯ ರಾಷ್ಟ್ರೀಯ ಹೆದ್ದಾರಿ 275 ಬಂದ್ ಆಗಿ ವಾಹನ ಸಂಚಾರವೂ ಸ್ಥಗಿತವಾಗಿತ್ತು.

ಸತತ ಎರಡು ಗಂಟೆ ಪ್ರಯಾಸದ ಕಾರ್ಯಾಚರಣೆ ಮೂಲಕ ಆನೆಗಳನ್ನು ನಗರದ ಕಡೆಯಿಂದ ಸಮೀಪದ ಕಾಫಿ ತೋಟದತ್ತ ಅರಣ್ಯ ಇಲಾಖೆ ಸಿಬ್ಬಂದಿ ಓಡಿಸಿಸಲು ಯಶ್ವಸಿಯಾದರು. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಮಿತಿ ಮೀರುತ್ತಿದ್ದರೂ ಸರ್ಕಾರ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ, ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ದೊಡ್ಡ ಅನಾಹುತ ನಿರ್ಮಾಣವಾಗುತ್ತೆ ಅಷ್ಟರೊಳಗೆ ಸಮಸ್ಯೆ ಬಗೆಹರಿಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.