ಭಾರತ ವಿರುದ್ಧದ ಮೊದಲ ಟೆಸ್ಟ್’ಗೆ ದಕ್ಷಿಣ ಆಫ್ರಿಕಾ ಬಲಿಷ್ಠ ತಂಡ ಪ್ರಕಟ

News No Comments on ಭಾರತ ವಿರುದ್ಧದ ಮೊದಲ ಟೆಸ್ಟ್’ಗೆ ದಕ್ಷಿಣ ಆಫ್ರಿಕಾ ಬಲಿಷ್ಠ ತಂಡ ಪ್ರಕಟ 40

ಜೊಹಾನ್ಸ್’ಬರ್ಗ್: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ 15 ಆಟಗಾರರನ್ನೊಳಗೊಂಡ ಬಲಿಷ್ಟ ತಂಡವನ್ನು ಪ್ರಕಟಿಸಲಾಗಿದೆ.

ಕೇಪ್’ಟೌನ್’ನಲ್ಲಿ ಜನವರಿ 5ರಿಂದ ಆರಂಭವಾಗಲಿರುವ ಪಂದ್ಯಕ್ಕೆ ಸುಮಾರು ಎರಡು ವರ್ಷಗಳ ಬಳಿಕ ಆಲ್ರೌಂಡರ್ ಕ್ರಿಸ್ ಮೋರಿಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೋಂಕು ಜ್ವರದಿಂದ ಬಳಲುತ್ತಿದ್ದ ನಾಯಕ ಫಾಪ್ ಡ್ಯು ಪ್ಲೆಸಿಸ್ ಹಾಗೂ ಅನುಭವಿ ವೇಗಿ ಡೇಲ್ ಸ್ಟೇನ್ ತಂಡಕ್ಕೆ ಮರಳಿದ್ದಾರೆ. 2016ರಲ್ಲಿ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಸ್ಟೇನ್, ಮಾರ್ನೆ ಮಾರ್ಕೆಲ್ ಹಾಗೂ ಎಬಿ ಡಿವಿಲಿಯರ್ಸ್ ತಂಡದಿಂದ ದೂರ ಉಳಿದಿದ್ದರು. ಜಿಂಬಾಬ್ವೆ ವಿರುದ್ಧದ ಏಕೈಕ 4 ದಿನದ ಟೆಸ್ಟ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಕ್ವಿಂಟನ್ ಡಿ ಕಾಕ್ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಹೀಗಿದೆ: ಫಾಪ್ ಡು ಪ್ಲೆಸಿಸ್(ನಾಯಕ), ಹಾಶೀಂ ಆಮ್ಲಾ, ತೆಂಬಾ ಬವುಮಾ, ಕ್ವಿಂಟಾನ್ ಡಿ ಕಾಕ್, ಥೆಯುನಿಸ್ ಡಿ ಬ್ರಿಯಾನ್, ಎಬಿ ಡಿ ವಿಲಿಯರ್ಸ್, ಡೀನ್ ಎಲ್ಗಾರ್, ಕೇಶವ್ ಮಹರಾಜ್, ಆ್ಯಯ್ಡನ್ ಮರ್ಕ್ರಾನ್, ಮಾರ್ನೆ ಮಾರ್ಕೆಲ್, ಕ್ರಿಸ್ ಮೋರಿಸ್, ಆಂಡಿಲೇ ಫೆಲುಕ್ವಾವ್ಯೋ, ವೆರ್ನಾನ್ ಫಿಲಾಂಡರ್, ಕಗಿಸೋ ರಬಾಡ, ಡೇಲ್ ಸ್ಟೇನ್.

Related Articles

Leave a comment

Back to Top

© 2015 - 2017. All Rights Reserved.