ಅನಂತಕುಮಾರ್ ಹೆಗಡೆ, ಗೋ ಮಧುಸುದನ್ ವಿರುದ್ಧ ಶ್ರೀನಿವಾಸ್ ಪ್ರಸಾದ್ ಆಕ್ರೋಶ

BREAKING NEWS, Kannada News, Regional, Top News No Comments on ಅನಂತಕುಮಾರ್ ಹೆಗಡೆ, ಗೋ ಮಧುಸುದನ್ ವಿರುದ್ಧ ಶ್ರೀನಿವಾಸ್ ಪ್ರಸಾದ್ ಆಕ್ರೋಶ 22

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಅನಂತ್ ಕುಮಾರ್ ಹೆಗಡೆಯನ್ನು ಕೇಂದ್ರ ಸಚಿವರಾಗಿ ಮಾಡಿರುವುದು ಅವಮಾನ ಎಂದು ಬಿಜೆಪಿ ಯಾವರೆಯಾದ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್ ಹರಿಹಾಯ್ದರು.

ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಸಂವಿಧಾನದ ಬಗ್ಗೆ ಹಗುರವಾದ ಹೇಳಿಕೆಗಳು ಸರಿಯಲ್ಲ, ಮೊದಲು ಇಂತಹ ಹೇಳಿಕೆ ಆರಂಭಸಿದವರು ಮಾಜಿ ವಿಧಾನ ಪರಿಷತ್ ಸದಸ್ಯ ಗೊ.ಮಧುಸೂದನ್. ಆತನ ಹೆಸರಲ್ಲೆ ಇದೆ. ಗೊ..ಗೊ..ಎನ್ನುತ್ತಾರೆ. ಕಂ ಕಂ ಅಂತ ಯಾರೂ ಕರೆಯುವುದಿಲ್ಲ. ಈತನಿಗೆ ನಾಚಿಕೆ ಆಗಬೇಕು, ಆಕ್ರೋಶ ವ್ಯಕ್ತಪಡಿಸಿದರು.

ಈ ನಂತರ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಚಾಟಿ ಬೀಸಿದ ಶ್ರೀನಿವಾಸ ಪ್ರಸಾದ್, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಈತನನ್ನು ಮಂತ್ರಿ ಮಾಡಿರುವುದು ಅವಮಾನ, ವಿಶ್ವದಲ್ಲೆ ಶ್ರೇಷ್ಠ ಸಂವಿಧಾನ ಅಂದರೆ ಅದು ಭಾರತದ ಸಂವಿಧಾನ. ಸಂವಿಧಾನದ ಆಶ್ರಯ ಮತ್ತು ಜಾತ್ಯತೀತತೆ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಪೇಜಾವರ ಶ್ರೀಗಳಿಗೆ ಸಂವಿಧಾನದ ಬಗ್ಗೆ ತಿಳುವಳಿಕೆ ಇದೆಯೇ. ನೀವು ಮಠಕ್ಕೆ ಮಾತ್ರ ಸೀಮಿತ. ಧರ್ಮ ಸಂಸತ್​​ನಲ್ಲಿ ಸಂವಿಧಾನದ ಬಗ್ಗೆ ಹಾಗೆ ಮಾತನಾಡಬಾರದು. ಧರ್ಮ ಸಂಸತ್ ಇಸ್ಲಾಮಿಕ್ ಸ್ಟೇಟ್ ಆಗುತ್ತಾ ಎಂದು ಶ್ರೀಗಳ ವಿರುದ್ಧವು ವಾಗ್ದಾಳಿ ನಡೆಸಿದರು.

Related Articles

Leave a comment

Back to Top

© 2015 - 2017. All Rights Reserved.