ಬಿ.ಕೆ.ದೇವರಾಜ್ ಗೆ ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಪ್ರದಾನ

Kannada News, Regional No Comments on ಬಿ.ಕೆ.ದೇವರಾಜ್ ಗೆ ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಪ್ರದಾನ 12

ಬಸ್ರೂರು: ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಬಿ.ಅಪ್ಪಣ್ಣ ಹೆಗ್ಡೆ ಅವರ 83ನೇ ಹುಟ್ಟುಹಬ್ಬದ ಪ್ರಯುಕ್ತ ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಬೆಳ್ತಂಗಡಿ ಮಿತ್ತಬೈಲಿನ ಪ್ರಗತಿಪರ ಕೃಷಿಕ ಬಿ.ಕೆ. ದೇವರಾಜ್ ಅವರಿಗೆ ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾ ನಂದ ಸ್ವಾಮೀಜಿ ಮಾತನಾಡಿ , ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ, ಕೃಷಿ ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆಮಾಡಿರುವ ಅಪ್ಪಣ್ಣ ಹೆಗ್ಡೆ ಅವರ ಸಾಮಾಜಿಕ ಕಾರ್ಯಗಳು ಎಲ್ಲರಿಗೂ ಮಾದರಿ. ಅವರ ಬದುಕು ಆದರ್ಶ ಪ್ರಾಯ ಎಂದರು.

ತನ್ನ ಸುದೀರ್ಘ ಬದುಕಿನಲ್ಲಿ ಸಾಮಾಜಿಕ ಚಟುವಟಿಕೆಯಲ್ಲೇ ಹೆಚ್ಚಿನ ಕಾಲ ಕಳೆದಿರುವುದು ತೃಪ್ತಿ ತಂದಿದೆ ಎಂದು ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ಕೃಷಿ ಬಗ್ಗೆ ತಾತ್ಸಾರ: 154 ಭತ್ತದ ತಳಿಗಳ ಸಂರಕ್ಷಕ, ಸಂಪೂರ್ಣ ಸಾವಯವ ಕೃಷಿಕ ಬಿ.ಕೆ.ದೇವರಾಜ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ರಾಸಾಯನಿಕ ಗೊಬ್ಬರ ಬಳಕೆಯಿಂದ ಭವಿಷ್ಯದಲ್ಲಿ ಸಾಂಪ್ರಾದಾಯಿಕ ಭತ್ತದ ತಳಿಗಳು ಮಾಯಾವಾಗುವ ಅಪಾಯ ಎದುರಾಗಿದೆ. ಸರಕಾರ ಉಚಿತವಾಗಿ ಅಕ್ಕಿ ನೀಡುತ್ತಿರುವುದರಿಂದ ಭತ್ತ ಬೇಸಾಯದ ಬಗ್ಗೆ ತಾತ್ಸಾರ ಭಾವ ಮೂಡಿದೆ ಎಂದು ವಿಷಾದಿಸಿದರು.

ಖಂಬದಕೋಣೆಯ ಆರ್.ಕೆ.ಸಂಜೀವ ರಾವ್ ಎಜುಕೇಶನ್ ಮತ್ತು ಕಲ್ಚರಲ್ ಅಕಾಡೆಮಿಯ ಅಧ್ಯಕ್ಷ ಕೆ. ಎಸ್.ಪ್ರಕಾಶ ರಾವ್ ಅಧ್ಯಕ್ಷತೆ ವಹಿಸಿದ್ದರು.

ದತ್ತಿನಿಧಿ ವಿತರಣೆ: ಇದೇ ಸಂದರ್ಭದಲ್ಲಿ ಆಯ್ದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ದತ್ತಿನಿಧಿ, ಅಶಕ್ತರು, ರೋಗಿಗಳಿಗೆ ಸಹಾಯಧನ ವಿತರಿಸಲಾಯಿತು. ಸತೀಶ್ ಕಮ್ಮಾರ್ ಗದಗ ಅವರು ರಚಿಸಿದ ‘ ಬಿ.ಕೆ ದೇವರಾಜ್ ಕೃಷಿತಪಸ್ವಿ’ ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಲಿಸಲಾಯಿತು.
ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್ ಶೆಟ್ಟಿ ಸ್ವಾಗತಿಸಿದರು. ಪ್ರತಿಷ್ಠಾನದ ಸಂಚಾಲಕ ಬಿ.ರಾಮಕಿಶನ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಚಂದ್ರಪ್ರಭಾ ಪರಿಚಯಿಸಿದರು. ದಿನಕರ ಆರ್.ಶೆಟ್ಟಿ ನಿರೂಪಿಸಿದರು.

Related Articles

Leave a comment

Back to Top

© 2015 - 2017. All Rights Reserved.