ಕರ್ನಾಟಕದವರು ಭಾರತೀಯರಲ್ವಾ..? ಪ್ರಧಾನಿ ಮೋದಿಗೆ ‘ರೆಬಲ್’ ಪ್ರಶ್ನೆ..!

BREAKING NEWS, Kannada News, Regional, Top News No Comments on ಕರ್ನಾಟಕದವರು ಭಾರತೀಯರಲ್ವಾ..? ಪ್ರಧಾನಿ ಮೋದಿಗೆ ‘ರೆಬಲ್’ ಪ್ರಶ್ನೆ..! 14

ಬೆಂಗಳೂರು: ಬಹುದಿನಗಳ ನಂತರ ವಿಧಾನಸೌಧಕ್ಕೆ ಬಂದ ಮಾಜಿ ಸಚಿವ ಅಂಬರೀಶ್, ಕರ್ನಾಟಕದವರು ಭಾರತೀಯರಲ್ವಾ..? ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪವಾದಾಗ ಮೋದಿ ಅವರು ಮದ್ರಾಸ್ ಗೆ ತೆರಳಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದಿದ್ದರು. ಆದರೆ ಕರ್ನಾಟಕದಲ್ಲಿ ಆ ರೀತಿಯ ವಿಕೋಪಗಳು ಅಲ್ಲಿಗಿಂತ ಐದರಷ್ಟು ಆಯ್ತು. ಆದರೆ ಪ್ರಧಾನಿ ಇಲ್ಲಿಗೆ ಬಂದು ಭೇಟಿಯೂ ನೀಡಲಿಲ್ಲ. ಯಾಕೆ ಕರ್ನಾಟಕದವರು ಭಾರತೀಯರು ಅಲ್ವಾ ಎಂದು ಮೋದಿ ಅವರಿಗೆ ರೆಬಲ್ ಸ್ಟಾರ್ ಅಂಬರೀಶ್ ಖಡಕ್ ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದಲ್ಲಿ 18 ಜನ ಸಂಸದರು ಬಿಜೆಪಿಯಿಂದ ಗೆದ್ದು ಬಂದವರು. ಆದರೆ ನಮಗೆ ಬಿಜೆಪಿಯ ಯಾವ ಸಂಸದರಿಂದಲೂ ಪ್ರಯೋಜನವಾಗಿಲ್ಲ. ಎಲ್ಲೆಲ್ಲಿಯೂ ಸ್ವಾರ್ಥ ತುಂಬಿಕೊಂಡಿದೆ. ಮಹಾರಾಷ್ಟ್ರದವರಿಗೆ ಅವರದೇ ಸ್ವಾರ್ಥ, ತಮಿಳುನಾಡಿನವರಿಗೆ ಸ್ವಾರ್ಥ, ನಮಗೂ ನಮ್ಮ ರಾಜ್ಯದ ಮೇಲೆ ಸ್ವಾರ್ಥ. ಎಲ್ಲರೂ ತಮ್ಮ ರಾಜ್ಯದ ಪರ ಸ್ವಾರ್ಥ ಹೊಂದಿರುತ್ತಾರೆ. ನದಿಯ ಬಗ್ಗೆ ಬಂದಾಗ ಎಲ್ಲರೂ ತಮ್ಮ ಸ್ವಾರ್ಥವನ್ನು ಬಿಡಬೇಕಾಗುತ್ತದೆ ಎಂದು ತಿಳಿಸಿದರು.

ನಾವೆಲ್ಲ ಒಂದೇ ದೇಶದ ಪ್ರಜೆಗಳು. ಕೇವಲ ಮದ್ರಾಸಿನವರು ಮಾತ್ರ ಭಾರತೀಯರಾ..? ನಾನು ಬೇರೆ ರಾಜ್ಯಕ್ಕೆ ನೀರು ಕೊಡಬೇಡಿ ಅಂತಾ ಹೇಳ್ತಿಲ್ಲ. ನಮಗೂ ಮತ್ತು ಮದ್ರಾಸಿನವರೆಗೂ ಸರಿಯಾದ ಮಾರ್ಗದಲ್ಲಿ ನೀರನ್ನು ಹಂಚಿಕೆ ಮಾಡಿ ಎಂದು ಕೇಳ್ತಿವಿ ಎಂದು ಅಂಬರೀಶ್ ಹೇಳಿದ್ದಾರೆ. ಎಲ್ಲ ರಾಜ್ಯದವರೂ ತಮ್ಮ ಸ್ವಾರ್ಥವನ್ನು ಬಿಟ್ಟರೆ ಮಹದಾಯಿ ಸಮಸ್ಯೆ ಒಂದು ದಿನದಲ್ಲಿ ಬಗೆಹರಿಯುತ್ತದೆ ಎಂದು ಹೇಳಿದರು.

Related Articles

Leave a comment

Back to Top

© 2015 - 2017. All Rights Reserved.