ಮೈಸೂರು ಜಿಲ್ಲೆಯ ಹಲವು ಯೋಜನೆಗಳಿಗೆ ಸಂಪುಟ ಒಪ್ಪಿಗೆ: ಡಾ.ಹೆಚ್.ಸಿ. ಮಹದೇವಪ್ಪ

Kannada News, Regional No Comments on ಮೈಸೂರು ಜಿಲ್ಲೆಯ ಹಲವು ಯೋಜನೆಗಳಿಗೆ ಸಂಪುಟ ಒಪ್ಪಿಗೆ: ಡಾ.ಹೆಚ್.ಸಿ. ಮಹದೇವಪ್ಪ 10

ಮೈಸೂರು: ಮೈಸೂರು ಜಿಲ್ಲೆಯ ಹಲವಾರು ಯೋಜನೆಗಳಿಗೆ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ತಿಳಿಸಿದ್ದಾರೆ.

ಮೈಸೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಕಾಮಗಾರಿಗಳಿಗೆ ಪರಿಷ್ಕøತ 20.60 ಕೋಟಿ ರೂ.ಗಳ ಅಂದಾಜು ವೆಚ್ಚಕ್ಕೆ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.  ಟಿ. ನರಸೀಪುರ ತಾಲ್ಲೂಕಿನ ಹೊಳೆಸಾಲು ಗ್ರಾಮದ ಸರ್ವೇ ಸಂಖ್ಯೆ 807 ಮತ್ತು 808ರ ಪಕ್ಕದಲ್ಲಿರುವ ಕಾವೇರಿ ನದಿ ಪಾತ್ರದ 3 ಎಕರೆ ಜಮೀನನ್ನು ಮೆ|| ಕಾರ್ತಿಕ್ ಎನೆರ್ಜಿ ರಿಸೋರ್ಸಸ್ ಸಂಸ್ಥೆಗೆ ಕಿರಿ ವಿದ್ಯುತ್ ಯೋಜನೆಗಾಗಿ ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟದಲ್ಲಿ ಸಮ್ಮತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಟಿ. ನರಸೀಪುರ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದ್ದಾರೆ. ವಿಳ್ಯೆದೆಲೆ ಬೆಳಗಾರರಿಗೆ ಜಮೀನು ಹಂಚಿಕೆಗೆ ಒಪ್ಪಿಗೆ: ಮೈಸೂರಿನ 245 ವಿಳ್ಯೆದೆಲೆ ಬೆಳಗಾರರಿಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಳ್ಯೆದೆಲೆ ಬೆಳೆಯುವ ಸಲುವಾಗಿ ತಲಾ 5 ಗುಂಟೆ ಜಮೀನಿನಂತೆ ಒಟ್ಟು 30 ಎಕರೆ 25 ಗುಂಟೆ ಜಮೀನು ಹಂಚಿಕೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.

Related Articles

Leave a comment

Back to Top

© 2015 - 2017. All Rights Reserved.