ಶೃಂಗೇರಿಗೆ ಆಗಮಿಸಿದ ದೊಡ್ಡ ಗೌಡರ ಫ್ಯಾಮಿಲಿ: ಕುಟುಂಬ ಹಿತದೃಷ್ಟಿಯಿಂದ 12 ದಿನ ನಡೆಯಲಿದೆ ಅತಿ ರುದ್ರ ಮಹಾಯಾಗ

BREAKING NEWS, Kannada News, Regional, Top News No Comments on ಶೃಂಗೇರಿಗೆ ಆಗಮಿಸಿದ ದೊಡ್ಡ ಗೌಡರ ಫ್ಯಾಮಿಲಿ: ಕುಟುಂಬ ಹಿತದೃಷ್ಟಿಯಿಂದ 12 ದಿನ ನಡೆಯಲಿದೆ ಅತಿ ರುದ್ರ ಮಹಾಯಾಗ 12

ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಕುಟುಂಬದ ಜೊತೆ ಜಿಲ್ಲೆಯ ಶೃಂಗೇರಿಗೆ ಅಗಮಿಸಿದ್ದಾರೆ. ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ಅಗಮಿಸಿದ ಹೆಚ್‍ಡಿಡಿ ಅವರ ಪತ್ನಿ ಚನ್ನಮ್ಮ, ಪುತ್ರ ರೇವಣ್ಣ ಅವರು ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮೀಜಿ, ವಿಧುಶೇಖರ ಸ್ವಾಮೀಜಿ ಅವರನ್ನ ಭೇಟಿ ಮಾಡಿದ್ದಾರೆ.

ಬಳಿಕ ಶಾರಾದಾಂಬೆಯ ದರ್ಶನ ಪಡೆದಿದ್ದಾರೆ. ನಾಳೆಯಿಂದ ಶ್ರೀ ಮಠದ 150 ಪುರೋಹಿತರ ನೇತೃತ್ವದಲ್ಲಿ ಅತಿ ರುದ್ರ ಮಹಾಯಾಗ ನಡೆಯಲಿದೆ.

ಈ ಯಾಗ 12 ದಿನ ನಡೆಯಲಿದ್ದು, ಜನವರಿ 14 ರಂದು ಪೂರ್ಣಾಹುತಿಯಾಗಲಿದೆ. ಶ್ರೀಮಠದ ಅವರಣದಲ್ಲಿರುವ ಯಾಗ ಮಂಟಪ ನಡೆಯಲಿರುವ ಅತಿ ಮಹಾರುದ್ರಯಾಗವನ್ನು ಕುಟುಂಬ ಹಿತದೃಷ್ಟಿಯಿಂದ ನಡೆಯಲಿದೆ. ಜನವರಿ 14 ರಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ .ಕುಮಾರಸ್ವಾಮಿ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.