ನೃತ್ಯಕಲೆ, ಸಂಗೀತ ಕಲೆಯ ಮೂಲಕ ನಮ್ಮ ಸಂಸ್ಕøತಿ ಗಟ್ಟಿಗೊಳಿಸುವ ಪ್ರಯತ್ನ ನಡೆಯುತ್ತಿದೆ ಮಂಜುನಾಥ ಕಾಮತ್

Kannada News, Regional No Comments on ನೃತ್ಯಕಲೆ, ಸಂಗೀತ ಕಲೆಯ ಮೂಲಕ ನಮ್ಮ ಸಂಸ್ಕøತಿ ಗಟ್ಟಿಗೊಳಿಸುವ ಪ್ರಯತ್ನ ನಡೆಯುತ್ತಿದೆ ಮಂಜುನಾಥ ಕಾಮತ್ 27

ಚಿಕ್ಕಮಗಳೂರು: ಆಧುನೀಕರಣ ಹಾಗೂ ಜಾಗತೀಕರಣದ ಪ್ರಭಾವದ ನಡುವೆ ನೃತ್ಯಕಲೆ ಹಾಗೂ ಸಂಗೀತ ಕಲೆಯ ಮೂಲಕ ನಮ್ಮ ಸಂಸ್ಕೃತಿ ಗಟ್ಟಿಗೊಳಿಸುವ, ಕಟ್ಟಿ ಬೆಳೆಸುವ, ಪ್ರಯತ್ನ ನಡೆಯುತ್ತಿದೆ ಎಂದು ಸುಗಮ ಸಂಗೀತ ಗಂಗಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಮತ್ ಹೇಳಿದರು.

ನಗರದ ಬಸವನಹಳ್ಳಿಯ ಮಹಿಳಾಶ್ರಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಚಿಣ್ಣರ ಗಾನ ಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ದೇಶದ ಸಂಸ್ಕೃತಿ ಪರಂಪರೆ, ದೇಶಭಕ್ತಿ, ಪರಿಸರ, ಗಿರಿ, ನದಿ ಜಲವನ್ನು ಪ್ರೀತಿಸುವ ನಿಟ್ಟಿನಲ್ಲಿ ಕಾವ್ಯ ಪರಂಪರೆ ಉತ್ತಮ ಕೊಡುಗೆ ನೀಡಿದೆ. ಕಾವ್ಯ ಪರಂಪರೆಯಲ್ಲಿ ಕುವೆಂಪು, ಬೇಂದ್ರೆ, ರಾಜರತ್ನಂ, ಎಚ್.ಎಸ್.ವೆಂಕಟೇಶ್‍ಮೂರ್ತಿ ಮುಂತಾದ ಕವಿಗಳು ಅತ್ಯುತ್ತಮ ಕವನಗಳನ್ನು ನೀಡಿ ಸಾಹಿತ್ಯ ವಲಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಆಶ್ರಮ ಶಾಲೆ ಮುಖ್ಯೋಪಾಧ್ಯಾಯ ಪ್ರವೀಣ್ ಮಾತನಾಡಿ, ಸಂಗೀತ ಎನ್ನುವುದನ್ನು ಸಹಜವಾಗಿ ಎಲ್ಲರನ್ನು ಒಗ್ಗೂಡಿಸುತ್ತದೆ. ಸಂಗೀತದಿಂದ ದೇವರನ್ನು ಸಹ ಒಲಿಸಿಕೊಳ್ಳಬಹುದು. ಸಂಗೀತ ಆಲಿಸುವುದರಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದರು.

ಮಕ್ಕಳಲ್ಲಿ ಅವರದ್ದೇ ಆದ ದಿವ್ಯತೆ ಇರುತ್ತದೆ. ಅದರ ಅಭಿವ್ಯಕ್ತಿಗೆ ಪ್ರೋತ್ಸಾಹ, ಸೂಕ್ತ ವೇದಿಕೆ ಕಲ್ಪಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಶಾಲೆಯು ಸುಗಮ ಸಂಗೀತ ಗಂಗಾ ಸಹಯೋಗದಲ್ಲಿ ಒಂದು ವಾರ ಮಕ್ಕಳಿಗೆ ಸಂಗೀತ ಶಿಬಿರ ಏರ್ಪಡಿಸಿದೆ ಎಂದರು.

ಒಂದುವಾರ ಕಾಲ ಮಕ್ಕಳಿಗೆ ಶಿಶುಗೀತೆಗಳು, ದೇಶಭಕ್ತಿಗೀತೆಗಳನ್ನು ಮಕ್ಕಳಿಗೆ ಕಲಿಸಿಕೊಟ್ಟ ಸುಗಮ ಸಂಗೀತ ಗಂಗಾದ ಖಜಾಂಚಿ ಸುಮಾ ಪ್ರಸಾದ್ ಹಾಗೂ ಶಾಲೆಯ ಕಾರ್ಯದರ್ಶಿ ಅನಿತಾ ನಾಗೇಂದ್ರ ಮಾತನಾಡಿದರು.

Related Articles

Leave a comment

Back to Top

© 2015 - 2017. All Rights Reserved.