ಬೃಹತ್ ರಕ್ತದಾನ ಶಿಬಿರ, ಬೈಕ್ ರ್ಯಾಲಿ ನಡೆಸಿ ಸೂರಜ್ ರೇವಣ್ಣ ಹುಟ್ಟುಹಬ್ಬ ಆಚರಿಸಿದ ಜೆಡಿಎಸ್ ಕಾರ್ಯಕರ್ತರು

Kannada News, Regional No Comments on ಬೃಹತ್ ರಕ್ತದಾನ ಶಿಬಿರ, ಬೈಕ್ ರ್ಯಾಲಿ ನಡೆಸಿ ಸೂರಜ್ ರೇವಣ್ಣ ಹುಟ್ಟುಹಬ್ಬ ಆಚರಿಸಿದ ಜೆಡಿಎಸ್ ಕಾರ್ಯಕರ್ತರು 26

ಹಾಸನ: ಸೂರಜ್ ರೇವಣ್ಣ ಹುಟ್ಟುಹಬ್ಬದ ಪ್ರಯುಕ್ತ ಉದಯಪುರದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಜೆಡಿಎಸ್ ಬೃಹತ್ ಬೈಕ್ ರ್ಯಾಲಿ ನಡೆದಿದೆ.

ಹಾಸನ ಜಿಲ್ಲೆಯಲ್ಲಿ ಅಪಾರ ಅಭಿಮಾನಿ ಬಲಗವನ್ನೇ ಹೊಂದಿರುವ ಸೂರಜ್ ರೇವಣ್ಣ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ರಕ್ತದಾನ ಶಿಬರ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಇದೆ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಬೈಕ್ ರ್ಯಾಲಿ ಕೂಡ ನೆಡೆಸಿದ್ದಾರೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಜಯಘೋಷ ಕೂಗಿದರು.

ಸ್ಥಳೀಯ ರೈತರಿಗೆ ಸೂರಜ್ ರೇವಣ್ಣ ಅವರು ಸುಮಾರು 2000 ತೆಂಗಿನ ಸಸಿಗಳನ್ನು ವಿತರಿಸಿದ್ದು ವಿಶೇಷವಾಗಿತ್ತು. ಒಟ್ಟಾರೆಯಾಗಿ ಸೂರಜ್ ರೇವಣ್ಣ ಹಾಸನದಲ್ಲಿ ಯುವ ಕಣ್ಮಣಿಯಾಗಿ ಜನಪ್ರಿಯ ಶಾಶಕ H.D ರೇವಣ್ಣ ಅವರ ರೀತಿಯಲ್ಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಹಾಸನ ಜಿಲ್ಲಾ ಭವಿಷ್ಯ ರಾಜಕಾರಣಿ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.