ಯದುವಂಶದ ಸಂಪ್ರದಾಯದಂತೆ ಅರಮನೆಯಲ್ಲಿ ನಡೆಯಲಿದೆ ಯುವರಾಜನ ನಾಮಕರಣ

BREAKING NEWS, Kannada News, Regional, Top News No Comments on ಯದುವಂಶದ ಸಂಪ್ರದಾಯದಂತೆ ಅರಮನೆಯಲ್ಲಿ ನಡೆಯಲಿದೆ ಯುವರಾಜನ ನಾಮಕರಣ 24

ಮೈಸೂರು: ಯದುವಂಶದ ಸಂಪ್ರದಾಯದಂತೆ ಯುವರಾಜನ ನಾಮಕರಣ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ನಡೆಯಲಿದೆ ಎಂದು ಮಹಾರಾಜ ಯದುವೀರ್ ಒಡೆಯರ್ ಹೇಳಿದ್ದಾರೆ.

ನಮ್ಮ ಸಂಪ್ರದಾಯದಂತೆ ನಾಮಕರಣ ಕಾರ್ಯಕ್ರಮ ನಡೆಯಲಿದೆ. ಅರಮನೆಯ ಮೂಹೂರ್ತ ಸಮಯ ನೋಡಿಕೊಂಡು ನಾಮಕರಣ ಮಾಡುತ್ತೇವೆ. ಹಲವು ಹೆಸರುಗಳನ್ನು ಯೋಚನೆ ಮಾಡಿದ್ದು, ಯಾವ ಹೆಸರನ್ನು ಅಧಿಕೃತ ಮಾಡಿಲ್ಲ. ಮಗನ ಎಲ್ಲಾ ಕಾರ್ಯಕ್ರಮಗಳು ಅರಮನೆಯಲ್ಲೇ ನಡೆದರೆ ನಮಗೆ ಇನ್ನಷ್ಟು ಖುಷಿ ಸಿಗಲಿದೆ ಎಂದು ತಿಳಿಸಿದರು.

ಸದ್ಯ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದು, ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಯದುವೀರ್ ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.