ಪ್ರಮುಖ ಆಟಗಾರರನ್ನು ಉಳಿಸಿಕೊಂಡ ಫ್ರಾಂಚೈಸಿಗಳು: ಆದರೆ ಈ ಸ್ಟಾರ್ ಆಟಗಾರರು ಔಟ್..!

Kannada News, Sports No Comments on ಪ್ರಮುಖ ಆಟಗಾರರನ್ನು ಉಳಿಸಿಕೊಂಡ ಫ್ರಾಂಚೈಸಿಗಳು: ಆದರೆ ಈ ಸ್ಟಾರ್ ಆಟಗಾರರು ಔಟ್..! 15

ಮುಂಬೈ: 2018 ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೂ ಮುನ್ನ ವಾಣಿಜ್ಯ ನಗರಿಯಲ್ಲಿ ನಡೆದ ಆಟಗಾರರ ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರಮುಖ ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಂಡಿದೆ.

ಐಪಿಎಲ್ 11ನೇ ಅವೃತ್ತಿಗೆ ಐಪಿಎಲ್ಫ್ರಾಂಚೈಸಿಗಳು ನಿಯಮದಂತೆ ತಲಾ ಮೂರು ಆಟಗಾರರನ್ನತಮ್ಮ ತಂಡದಲ್ಲೇ ಉಳಿಸಿಕೊಂಡಿದ್ದಾರೆ. ಚಾಲೆಂಜರ್ಸ್ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ, ಎಬಿಡಿವಿಲಿಯರ್ಸ್, ಸರ್ಫರಾಜ್ ಖಾನ್ ಅವರನ್ನ ಉಳಿಸಿಕೊಂಡಿದೆ ನಿರೀಕ್ಷೆಯಂತೆ ಧೋನಿಯನ್ನ ಚೆನ್ನೈ ತಂಡ 15 ಕೋಟಿ ರೂ. ಗೆ ರೀಟೇನ್ ಮಾಡಿಕೊಂಡಿದೆ. ಕೋಲ್ಕತ್ತಾತಂಡ ಗೌತಮ್ ಗಂಭೀರ್ ಅವರನ್ನ ಕೈಬಿಟ್ಟಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ರಿಸ್ ಗೇಲ್ ಅವರನ್ನ ಕೈಬಿಟ್ಟಿದೆ.

ಯಾವ್ಯಾವ ತಂಡ ಯಾವ್ಯಾವ ಆಟಗಾರರನ್ನ ಉಳಿಸಿಕೊಂಡಿದೆ ಎಂಬುದರ ಪಟ್ಟಿ ಇಲ್ಲಿದೆ.

  ತಂಡ     ಆಟಗಾರ      ಆಟಗಾರ      ಆಟಗಾರ
ರಾಯಲ್ ಚಾಲೆಂಜರ್ಸ್ ಬೆಂಗಳೂರು  ವಿರಾಟ್ ಕೊಹ್ಲಿ  ಎಬಿಡಿವಿಲಿಯರ್ಸ್  ಸರ್ಫರಾಜ್  ಖಾನ್
ಚೆನ್ನೈ ಸೂಪರ್ ಕಿಂಗ್ಸ್  ಎಂ.ಎಸ್. ಧೋನಿ  ಸುರೇಶ್ ರೈನಾ  ರವೀಂದ್ರ ಜಡೇಜಾ
ಡೆಲ್ಲಿ ಡೇರ್ ಡೆವಿಲ್ಸ್   ರಿಷಭ್ ಪಂತ್  ಕ್ರಿಸ್ ಮೋರಿಸ್  ಶ್ರೇಯಸ್ ಅಯ್ಯರ್
ಮುಂಬೈ ಇಂಡಿಯನ್ಸ್   ರೋಹಿತ್ ಶರ್ಮಾ  ಹಾರ್ದಿಕ್ ಪಾಂಡ್ಯಾ  ಜಸ್ಪ್ರೀತ್ ಬುಮ್ರಾ
ರಾಜಸ್ಥಾನ್ ರಾಯಲ್ಸ್  ಸ್ಟೀವನ್ ಸ್ಮಿತ್    
ಸನ್ ರೈಸರ್ಸ್ ಹೈದ್ರಾಬಾದ್  ಡೇವಿಡ್ ವಾರ್ನರ್  ಭುವನೇಶ್ವರ್ ಕುಮಾರ್  
ಕಿಂಗ್ಸ್ ಇಲೆವೆನ್ ಪಂಜಾಬ್  ಅಕ್ಷರ್ ಪಟೇಲ್    
ಕೋಲ್ಕತ್ತಾ ನೈಟ್ ರೈಡರ್ಸ್  ಸುನಿಲ್ ನರೈನ್  ಆಂಡ್ರ್ಯೂ ರಸೆಲ್  

Related Articles

Leave a comment

Back to Top

© 2015 - 2017. All Rights Reserved.