ಸಿಎಂ ಸಿದ್ದರಾಮಯ್ಯರ ಮತ್ತೊಂದು ದುಬಾರಿ ಸುದ್ದಿ: ಮನೆ ಅಲಂಕಾರಕ್ಕೆ ವರ್ಷಕ್ಕೆ 1 ಕೋಟಿ ಖರ್ಚು..!

BREAKING NEWS, Kannada News, Regional, Top News No Comments on ಸಿಎಂ ಸಿದ್ದರಾಮಯ್ಯರ ಮತ್ತೊಂದು ದುಬಾರಿ ಸುದ್ದಿ: ಮನೆ ಅಲಂಕಾರಕ್ಕೆ ವರ್ಷಕ್ಕೆ 1 ಕೋಟಿ ಖರ್ಚು..! 41

ಬೆಂಗಳೂರು: ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರ ದುಬಾರಿ ಸುದ್ದಿಗಳು ಒಂದರ ಹಿಂದೆ ಒಂದರಂತೆ ಬರುತ್ತಲೇ ಇವೆ. ಬೆಳ್ಳಿ ತಟ್ಟೆ ಊಟ, ಜಿಮ್ ವಸ್ತು ಖರೀದಿ ಆಯ್ತು ಇದೀಗ ಮನೆಯ ಹೊರಗಿನ ಅಲಂಕಾರಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿರುವ ಮಾಹಿತಿ ಬಯಲಾಗಿದೆ.

ಹೌದು. ಆರ್.ಟಿ.ಐ ಮಾಹಿತಿಯಡಿ ಈ ವಿಷಯ ಬಯಲಾಗಿದೆ. ಸಿಎಂ ನಿವಾಸ ಕಾವೇರಿ, ಕೃಷ್ಣ ನಿವಾಸಗಳ ಹೋರಗಿನ ಚಿಕ್ಕ ಚಿಕ್ಕ ಕೆಲಸಕ್ಕೂ ಲಕ್ಷಾಂತರ ರೂ ಖರ್ಚು ಮಾಡಲಾಗಿದೆ. ಈ ವರ್ಷ ಕಾವೇರಿ, ಕೃಷ್ಣದ ಕೌಂಪೌಂಡ್‍ಗೆ ಬಣ್ಣ ಬಳಿಯಲು, ಮೇಲ್ಛಾವಣಿ ಸರಿ ಮಾಡಲು, ಕಾರ್ ಗ್ಯಾರೇಜ್ ಸರಿ ಮಾಡಲು, ಮಳೆ ನೀರು ಕೋಯ್ಲು ಅಳವಡಿಸಿಕೊಳ್ಳಲು ಬರೋಬ್ಬರಿ ಒಂದು ಕೋಟಿ ರೂ. ಖರ್ಚು ಮಾಡಲಾಗಿದೆ.

ಇಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರ ಮನೆಯ ಹೊರಗಿನ ಅಲಂಕಾರಕ್ಕೆ ಇಷ್ಟು ಖರ್ಚು ಮಾಡಿದ್ದಲ್ಲದೆ. ಇದರಲ್ಲೂ ಲೋಕೋಪಯೋಗಿ ಇಲಖೆ ಅಧಿಕಾರಗಳು ಗೋಲ್‍ಮಾಲ್ ಮಾಡಿದ್ದಾರೆ. ಸಿಎಂ ಮನೆ ಮುಂದೆ ಎಷ್ಟೋ ಕೆಲಸಗಳು ಆಗದೆ ಬಿಲ್ ಮಾಡಿಕೊಂಡಿದ್ದಾರೆ. ಪೊಲೀಸ್ ಚೌಕಿ ನಿರ್ಮಾಣದ ಹೆಸರಲ್ಲಿ, ಇನ್ನಿತರ ಕೆಲಸಗಳಿಗೆ ಎರೆಡರೆಡು ಬಾರಿ ಬಿಲ್ ಮಾಡಿ ಹಣ ಲೂಟಿ ಮಾಡಿದ್ದಾರೆ. 5 ಲಕ್ಷ ಮೇಲ್ಪಟ್ಟ ಕಾಮಗಾರಿಗೆ ಟೆಂಡರ್ ಕರೆಯಬೇಕು. ಹೀಗೆ ಮಾಡಿದರೆ ದುಡ್ಡು ಸಿಗೊಲ್ಲ ಎಂದು 5 ಲಕ್ಷದ ಒಳಗೆ ಎಲ್ಲಾ ಕಾಮಗಾರಿ ಮುಗಿಸಿ ಜಾಣ್ಮೆಯಿಂದ ಹಣ ಲೂಟಿ ಮಾಡಿದ್ದಾರೆ.

ಈ ಕಾಮಗಾರಿಗಳನ್ನ ಪ್ರತಿ ವರ್ಷ ಮಾಡಬೇಕಾಗಿಲ್ಲ. ಹೀಗಿದ್ದರೂ ವರ್ಷ ವರ್ಷ ಲೋಕೋಪಯೋಗಿ ಇಲಾಖೆ ಕೋಟಿ ಖರ್ಚು ಮಾಡ್ತಿದೆ. ಇದೆಲ್ಲ ಸಿಎಂಗೆ ಗೊತ್ತಿದ್ದರೂ ಸುಮ್ಮನಿರೋದು ಏಕೆ ಎಂಬುದು ಪ್ರಶ್ನೆಯಾಗೆ ಉಳಿದಿದೆ.

Related Articles

Leave a comment

Back to Top

© 2015 - 2017. All Rights Reserved.