ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದ ಅಮೆರಿಕಾ: 1.15 ಅರಬ್​ ಡಾಲರ್​ ಸೇನಾ ನೆರವು ಸ್ಥಗಿತ

International, Kannada News No Comments on ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದ ಅಮೆರಿಕಾ: 1.15 ಅರಬ್​ ಡಾಲರ್​ ಸೇನಾ ನೆರವು ಸ್ಥಗಿತ 12

ವಾಷಿಂಗ್ಟನ್: ​ ಪಾಕ್​ ವಿರುದ್ದ ಅಮೆರಿಕಾ ಶಾಕಿಂಗ್ ಸುದ್ದಿಗಳನ್ನ ನೀಡುತ್ತಲೇ ಇದೆ. ಕೆಲ ದಿನಗಳ ಹಿಂದಷ್ಟೇ ಪಾಕ್​ನ ಹಣಕಾಸು ನೆರವನ್ನು ಕಡಿತಗೊಳಿಸಿದ್ದ ಅಮೆರಿಕಾ, ಇದೀಗ 1.15 ಅರಬ್​ ಡಾಲರ್​ನ ಸೇನಾ ನೆರವನ್ನೂ ಸ್ಥಗಿತಗೊಳಿಸಿದೆ.

ಅಮೆರಿಕಾ ವಿದೇಶಾಂಗ ಸಚಿವಾಲಯದ ವಕ್ತಾರ ಹೀದರ್ ನೋಯೆರ್ಟ್​ ‘ಇಂದು ನಾವು ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಎಲ್ಲಾ ರೀತಿಯ ಸೇನಾ ನೆರವಮನ್ನೂ ಸ್ಥಗಿತಗೊಳಿಸಿದ್ದೇವೆ. ಎಲ್ಲಿಯವರೆಗೆ ಅಫ್ಘಾನ್ ತಾಲೀಬಾನ್ ಹಾಗೂ ಹಕ್ಕಾನಿ ನೆಟ್ವರ್ಕ್​ನಂತಹ ಉಗ್ರ ಸಂಘಟನೆಗಳ ವಿರುದ್ಧ ಇಸ್ಲಮಾಬಾದ್ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ಸೇನಾ ನೆರವನ್ನೂ ನೀಡುವುದಿಲ್ಲ’ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ಈ ಹಿನ್ನಲೆ ಸೇನಾ ನೆರವನ್ನು ನಿಲ್ಲಿಸಿರುವುದು ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ಬಿದ್ದಂತಾಗಿದ್ದು, ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Related Articles

Leave a comment

Back to Top

© 2015 - 2017. All Rights Reserved.