ಶಾಸಕ‌ ಜಿ.ಟಿ.ದೇವೇಗೌಡರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

Kannada News, Regional No Comments on ಶಾಸಕ‌ ಜಿ.ಟಿ.ದೇವೇಗೌಡರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ 10

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಅವರು ಚಾಲನೆ ನೀಡಿದರು.

ಹಾರೋಹಳ್ಳಿ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಹಾಗೂ ಸಾಮಾನ್ಯರ ಬೀದಿಯಲ್ಲಿ ರೂ.15 ಲಕ್ಷ ದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಚಾಲನೆ ನೀಡಿದರು. ನಂತರ ಗುಜ್ಜೇಗೌಡನಪುರ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ರೂ. 10 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿದರು.

ನಂತರ ರೂ.4 ಲಕ್ಷ ವೆಚ್ಚದಲ್ಲಿ ಒಕ್ಕಲಿಗರ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಮದ್ದೂರುಹುಂಡಿ ಗ್ರಾಮದಲ್ಲಿ ರೂ.10 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಹಾಗೂ ರೂ. 100 ಲಕ್ಷ ದಲ್ಲಿ ಮದ್ದೂರು ಗ್ರಾಮದಲ್ಲಿರುವ ವಡವಿನಕಟ್ಟೆ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದರು. ಚುಂಚರಾಯನಹುಂಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.

ಈ ವೇಳೆ ಜಿ.ಪಂ.ಸದಸ್ಯರಾದ ಪ್ರೇಮಕುಮಾರಿ‌ ಮಹದೇವಸ್ವಾಮಿ,‌ ಎ.ಪಿ.ಎಂ.ಸಿ. ಅಧ್ಯಕ್ಷರಾದ ಎಸ್.ಸಿದ್ದೇಗೌಡ, ಜಿ.ಪಂ.ಸದಸ್ಯರಾದ ಬೀರಿಹುಂಡಿ ಬಸವಣ್ಣ, ತಾ.ಪಂ. ಅಧ್ಯಕ್ಷರಾದ ಕಾಳಮ್ಮ, ಕೆಂಪರಾಮಯ್ಯ, ಗ್ರಾ.ಪಂ.ಅಧ್ಯಕ್ಷರು., ಸದಸ್ಯರುಗಳು ಜೆ.ಡಿ.ಎಸ್ ಮುಖಂಡರು ಆದ ಸಂದೀಪ್, ಮಹದೇವಸ್ವಾಮಿ, ಜವರನಾಯಕ ಹಾಗೂ ಎ.ಇ.ಇ.ಜಿಪಂ. ಇ.ಓ. ಹಲವಾರು ಮುಖಂಡರು ಭಾಗವಹಿದ್ದರು.

Related Articles

Leave a comment

Back to Top

© 2015 - 2017. All Rights Reserved.