ದೀಪಕ್ ರಾವ್ ಹಂತಕರನ್ನು ಬಿಟ್ಟು ಹಿಂದೂಗಳನ್ನೇ ಬಂಧಿಸಲು ಆದೇಶ ನೀಡಿದ ಸಿದ್ದರಾಮಯ್ಯ..! ಶವ ನೀಡದೆ ಮೋಸ ಮಾಡಿದ ಉಸ್ತುವಾರಿ ಸಚಿವ..!

Kannada News, Regional No Comments on ದೀಪಕ್ ರಾವ್ ಹಂತಕರನ್ನು ಬಿಟ್ಟು ಹಿಂದೂಗಳನ್ನೇ ಬಂಧಿಸಲು ಆದೇಶ ನೀಡಿದ ಸಿದ್ದರಾಮಯ್ಯ..! ಶವ ನೀಡದೆ ಮೋಸ ಮಾಡಿದ ಉಸ್ತುವಾರಿ ಸಚಿವ..! 22

ಮಂಗಳೂರು: ಮೊನ್ನೆ ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಭೀಕರವಾಗಿ ಹತ್ಯೆ ಮಾಡಿದ ಸಂಬಂಧ ಈಗ ಕರಾವಳಿ ಕೆಂಡವಾಗಿದೆ. ಸಂಘಟನೆಯ ಕಾರ್ಯಕರ್ತನನ್ನು ಕಳೆದುಕೊಂಡ ಧುಖಃದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಇದ್ದರೆ ಮತ್ತೊಂದೆಡೆ ಕಾಂಗ್ರೆಸ್‍ನ ರಾಜಕಾರಣಿಗಳು ತಮ್ಮ ರಾಜಕೀಯ ಬುದ್ಧಿಯನ್ನು ಮುಂದುವರೆಸಿದ್ದಾರೆ.

ಮುಖ್ಯಮಂತ್ರಿಗಳ ಅಹಂಕಾರ ಎಷ್ಟಿದೆಯೆಂದರೆ, ಒಬ್ಬ ಕಾರ್ಯಕರ್ತನನ್ನು ಕಳೆದುಕೊಂಡ ನೋವಿನಲ್ಲಿ ಸಮಸ್ತ ಹಿಂದೂ ಸಮಾಜ ಇಂದು ನರಳುತ್ತಿದೆ. ಧುಃಖ ಮಡುಗಟ್ಟಿದೆ. ಹೀಗಿರುವಾಗ ಹಿಂದೂಗಳ ಮೇಲೆಯೇ ಕೇಸು ದಾಖಲಿಸಿ ಎಂದು ಆದೇಶ ನೀಡುತ್ತಿದ್ದಾರೆ ಮಾನ್ಯ ಮುಖ್ಯಮಂತ್ರಿಗಳು. ಅಂತ್ಯಸಂಸ್ಕಾರದ ವೇಳೆ ಏನಾದರು ಅವಘಡ ನಡೆದರೆ ಅದಕ್ಕೆ ಬಜರಂಗದಳದವರೇ ಹೊಣೆ. ಮೊದಲು ಅವರನ್ನು ಬಂಧಿಸಿ ಎಂದು ಆದೇಶ ನೀಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಶಂಡತನ ಮೆರೆದ ಸರ್ಕಾರ…!

ದೀಪಕ್ ರಾವ್‍ನ ಹತ್ಯೆ ಮಂಗಳೂರಿನ ಜನತೆಯನ್ನು ಬೆಚ್ಚಿ ಬೀಳಿಸಿದ್ದು ಆಕ್ರೋಷ ಮುಗಿಲು ಮುಟ್ಟಿತ್ತು. ದೀಪಕ್ ರಾವ್‍ನ ಶವ ಯಾತ್ರೆಯನ್ನು ನಿನ್ನೆ ಬೆಳಿಗ್ಗೆ ಮಾಡುವುದಾಗಿ ಹಿಂದೂ ಸಂಘಟನೆಗಳು ಹಾಗೂ ಭಾರತೀಯ ಜನತಾ ಪಕ್ಷ ಘೋಷಿಸಿತ್ತು. ಈ ಮೂಲಕ ತಮ್ಮ ಕಾರ್ಯಕರ್ತನನ್ನು ಕಳೆದುಕೊಂಡ ಚಿಂತೆಯಲ್ಲಿರುವ ಹಿಂದೂ ಸಂಘಟನೆಗಳು ಆತನ ಶವಯಾತ್ರೆಯನ್ನು ಮಾಡಿ ಆತನನ್ನು ಹುತಾತ್ಮ ಎಂದು ಸಾರಲು ಸಿದ್ದವಾಗಿ ನಿಂತಿದ್ದರು. ಆದರೆ ಹಿಂದೂ ಸಂಘಟನೆಗಳ ಈ ತಯಾರಿಗೆ ಸರಕಾರ ಒಲ್ಲೆ ಎಂದಿತ್ತು. ನಿನ್ನೆಯೇ ಸರ್ಕಾರ ಅನುಮತಿಯನ್ನು ನೀಡೋದಿಲ್ಲ ಎಂದು ಘೋಷಿಸಿತ್ತು.

ಆದರೆ ಹಿಂದೂ ಸಂಘಟನೆಗಳು ಮಾತ್ರ ತಮ್ಮ ಪಟ್ಟನ್ನು ಬಿಡಲೇ ಇಲ್ಲ. ಶವಯಾತ್ರೆ ನಡೆಸಿಯೇ ಸಿದ್ದ ಅದೇನೇ ಆಗಲಿ ಎಂದು ಘಂಟಾಘೋಷವಾಗಿ ಸಾರಿದ್ದರು. ಆದರೆ ನಿನ್ನೆ ಬೆಳಗ್ಗೆ ಕಥೆನೇ ಬೇರೆಯಾಗಿತ್ತು. ಮಂಗಳೂರಿನ ಎಜೆ ಆಸ್ಪತ್ರೆಯ ಮುಂಬಾಗದಲ್ಲಿ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ತನ್ನ ಸಮಾಜದ ಹುತಾತ್ಮನನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಆತನಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಕಲ ರೀತಿಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಸರ್ಕಾರ ಮಾತ್ರ ಶಂಡತನ ಮೆರೆದಿತ್ತು. ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮಾತ್ರವಲ್ಲದೆ ಮೃತ ದೀಪಕ್ ರಾವ್‍ನ ಕುಟುಂಬಸ್ಥರು ಸಮೇತ ಆಸ್ಪತ್ರೆಯ ಮುಂದೆ ಕಾದು ಕುಳಿತಿದ್ದರೂ ದೀಪಕ್ ರಾವ್‍ನ ಮೃತ ದೇಹವನ್ನು ಆಸ್ಪತ್ರೆಯ ಹಿಂಬಾಗಿಲ ಮೂಲಕ ಕಳ್ಳರ ಹಾಗೆ ನೇರ ಮನೆಗೆ ಸಾಗಿಸಿತ್ತು ಸರಕಾರ. ಮೃತದೇಹವನ್ನು ಆಸ್ಪತ್ರೆಯಲ್ಲಿದ್ದ ಕುಟುಂಬಸ್ಥರಿಗೆ ಹಸ್ತಾಂತರ ಮಾಡದೆ ವಾಮಮಾರ್ಗ ಹಿಡಿದು ಕಳ್ಳರ ಹಾಗೆ ಯಾರಿಗೂ ಮಾಹಿತಿ ನೀಡದೆ ಶವವನ್ನು ಮನೆಗೆ ಸಾಗಿಸಿ ತನ್ನ ಶಂಡತನವನ್ನು ಮೆರೆದಿದೆ.

Related Articles

Leave a comment

Back to Top

© 2015 - 2017. All Rights Reserved.