ಬಸ್ ಶೆಲ್ಟರ್‍ಗೆ ಕಲ್ಲು : ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ

Kannada News, Regional No Comments on ಬಸ್ ಶೆಲ್ಟರ್‍ಗೆ ಕಲ್ಲು : ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ 63

ಮೈಸೂರು: ನಗರಕ್ಕೆ ಹೊಂದಿಕೊಂಡಂತೆ ಇರುವ ಸೋಮನಾಥನಗರ (ಕೇರ್ಗಳ್ಳಿ)ಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಾಣಗೊಂಡಿದ್ದ ಶಾಸಕರ ಭಾವ ಚಿತ್ರವಿರುವ ಬಸ್ ಶೆಲ್ಟರ್‍ಗೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.

ಕಿಡಿಗೇಡಿಗಳ ಕೃತ್ಯವನ್ನು ಖಂಡೀಸಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬೀರಿಹುಂಡಿ ಬಸವಣ್ಣರವರ ನೇತೃತ್ವದಲ್ಲಿ ಸ್ಥಳದಲ್ಲಿ ಪ್ರತಿಭಟನೆ ನಡಸಲಾಯಿತು. ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಹಾಗೂ ಇಂತಹ ಕೃತ್ಯಗಳು ಮರುಕರಿಸದಂತೆ ಕ್ರಮ ವಹಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಮೇಶ್ ಕಲ್ಲಿಪಾಳ್ಯ, ಕೆ.ಸಾಲುಂಡಿ ರಾಜು, ಬೋಜೇಗೌಡ, ದಿನೇಶ್‍ಗೌಡ, ಕೇರ್ಗಳ್ಳಿ ಶಿವಪ್ಪ, ಶಂಕರ್ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.