ಕರ್ನಾಟಕ ಸೇನಾ ಪಡೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 114 ನೇ ಜಯಂತಿ ಆಚರಣೆ

Kannada News, Regional No Comments on ಕರ್ನಾಟಕ ಸೇನಾ ಪಡೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 114 ನೇ ಜಯಂತಿ ಆಚರಣೆ 21

ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸರ್ಕಾರಿ ಮಹಾರಾಣಿ ಎನ್.ಟಿ.ಎಮ್ ಕನ್ನಡ ಶಾಲೆಯಲ್ಲಿ ಅಲ್ಲಿನ 45 ಮಕ್ಕಳಿಗೆ ಶಾಲಾ ಬಿಳಿ ಸಮವಸ್ತ್ರ ನೀಡುವುದರ ಮೂಲಕ ರಾಷ್ಟ್ರಕವಿ ಕುವೆಂಪು ಅವರ 114 ನೇ ಜಯಂತಿ ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಫ್ರೊ. ಸಿ. ಬಸವರಾಜು ಅವರು ನೆರವೇರಿಸಿದರು. ಈ ನಂತರ ಮಾತನಾಡಿ “ಕುವೆಂಪು ಅವರ ಕಾದಂಬರಿಗಳು ಜೀವನಕ್ಕೆ ಹತ್ತಿರವಾಗಿದೆ. ಅವರು ಬರೀ ನಮ್ಮ ನಾಡಿನ ಕವಿ ಅಲ್ಲ, ಜಗದಕವಿ, ಯುಗದಕವಿ, ರಾಷ್ಟ್ರಕವಿ, ಹಾಗೂ ರಾಷ್ಟ್ರವನ್ನು ಜಾಗ್ರತಿ ಮೂಡಿಸಿದ ವ್ಯಕ್ತಿ. ಅವರು ಬರವಣಿಗೆಯ ಮೂಲಕ ಎಲ್ಲರನ್ನೂ ಎಬ್ಬಿಸಿದರು. ಮೇಲುಕೀಳು ವಿರುದ್ಧ ಬರವಣಿಗೆಯ ಮೂಲಕ ಹೋರಾಡಿದರು. ಅವರ ಜಲಗಾರ, ಶೂದ್ರತಪಸ್ವಿ ಅನೇಕ ಸಾಹಿತ್ಯ ಪ್ರಕಾರಗಳನ್ನು ಓದಿದರೆ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುಬಹುದು. ಓದುವುದರ ಮೂಲಕ ಮಾತ್ರ ಸಮಾಜದಲ್ಲಿ ಬದಲಾವಣೆ ಯನ್ನು ತರಬಹುದು, ಇದು ಎಲ್ಲರಲ್ಲೂ ವೈಯುಕ್ತಿಕವಾಗಿ ಬರಬೇಕು.

ನಮ್ಮ ಸಣ್ಣತನ ಮರೆಯಬೇಕು, ನಾವು ವಿಶ್ವಮಾನವನಾಗಿ ಆಲೋಚನೆ ಮಾಡಬೇಕು. ಈಗಿನ ಕಾಲದಲ್ಲಿ ಮೌಲ್ಯಗಳು ಕುಂಠಿತವಾಗುತ್ತಿವೆ. ಎಲ್ಲರೂ ಗುರುಹಿರಿಯರಿಗೆ ಗೌರವ ಕೊಡಬೇಕು, ಪ್ರತಿಯೊಬ್ಬರೂ ಗೌರವವಾಗಿ ನಡೆಯಬೇಕಾದರೆ ಮಾನವೀಯ ಮೌಲ್ಯಗಳನ್ನು ತಿಳಿಹೇಳಬೇಕು, ಇಂತಹ ಮಹನೀಯರ ಹುಟ್ಟುಹಬ್ಬವನ್ನು ಕರ್ನಾಟಕಸೇನಾ ಪಡೆಯು ಈ ರೀತಿ ಕನ್ನಡ ಶಾಲೆಯಲ್ಲಿ ಆಚರಿಸಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡುತ್ತಿರುವುದು ಶ್ಲಾಘನೀಯ ಎಂದರು.”

ಸಮವಸ್ತ್ರ ವಿತರಣೆಯನ್ನು ಲಯನ್ ಮಹಮ್ಮದ್ ನಾಸಿರ್ ರವರು ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆ ಕೆ. ರಘುರಾಂವಾಜಪೇಯಿ ವಹಿಸಿದ್ದರು, ಮುಖ್ಯಅತಿಥಿಗಳಾಗಿ ಡಾ. ಕೆ ಲೀಲಾ ಪ್ರಕಾಶ್, ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್ ಪ್ರಕಾಶ್, ಗೀತಾ, ಕರ್ನಾಟಕಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹಾಗೂ ಸೇನಾ ಪಡೆಯ ಬಹಳ ಕಾರ್ಯಕರ್ತರು ಹಾಜರಿದ್ದರು.

Related Articles

Leave a comment

Back to Top

© 2015 - 2017. All Rights Reserved.