ಹೊಸ ವಿನ್ಯಾಸದ 10ರೂ ನೋಟು ಬಿಡುಗಡೆಗೊಳಿಸಿದ ಆರ್ ಬಿಐ: ಇದರ ವೈಶಿಷ್ಟ್ಯಗಳೇನು ಗೊತ್ತಾ..!

Kannada News, National, Technology No Comments on ಹೊಸ ವಿನ್ಯಾಸದ 10ರೂ ನೋಟು ಬಿಡುಗಡೆಗೊಳಿಸಿದ ಆರ್ ಬಿಐ: ಇದರ ವೈಶಿಷ್ಟ್ಯಗಳೇನು ಗೊತ್ತಾ..! 98

ನವದೆಹಲಿ: 2000, 500, 200 ಮತ್ತು 50ರ ಹೊಸ ವಿನ್ಯಾಸದ ನೋಟಿನ ನಂತರ ಆರ್ ಬಿಐ 10 ರುಪಾಯಿ ಮುಖ ಬೆಲೆಯ ಹೊಸ ವಿನ್ಯಾಸದ ಚಾಕೊಲೆಟ್ ಬಣ್ಣದ ನೋಟುಗಳನ್ನು ಬಿಡುಗಡೆ ಮಾಡಿದೆ. 

ಕಳೆದ ವಾರ ಹೊಸ 10 ರುಪಾಯಿ ಮುಖ ಬೆಲೆಯ ನೋಟು ಮುದ್ರಣದ ವಿನ್ಯಾಸಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದ್ದ ಆರ್ ಬಿಐ ಇಂದು ಅಧಿಕೃತವಾಗಿ ನೋಟು ಬಿಡುಗಡೆ ಮಾಡಿದೆ. ಅಲ್ಲದೆ ಈಗಾಗಲೇ ಅಂದಾಜು 100 ಕೋಟಿ 10 ರುಪಾಯಿ ನೋಟುಗಳನ್ನು ಮುದ್ರಣ ಮಾಡಿದೆ ಎನ್ನಲಾಗಿದೆ. ಈ ಹೊಸ 10 ರೂ ನೋಟಿನಲ್ಲಿ ಮಹಾತ್ಮ ಗಾಂಧಿ ಸರಣಿಯ ಚಾಕೋಲೆಟ್ ಬಣ್ಣದ ನೋಟಿನ ಮೇಲೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಹಿ ಹಾಗೂ ಹಿಂಬದಿಯಲ್ಲಿ ಒಡಿಶಾ ಕೊನಾರ್ಕ್​ನ ಪ್ರಸಿದ್ಧ ಸೂರ್ಯ ದೇವಾಲಯದ ಚಿತ್ರವಿದೆ. 

2016ರ ನವೆಂಬರ್ 8ರಂದು 1 ಸಾವಿರ ರೂ. ಹಾಗೂ 500 ರೂ. ನೋಟು ನಿಷೇಧದ ಬಳಿಕ ಆರ್ ಬಿಐ ಹೊಸ 500, 2000 ರುಪಾಯಿ ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. ನೋಟ್ ಬ್ಯಾನ್ ಬಳಿಕ ಸೃಷ್ಟಿಯಾಗಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆ ಹರಿಸಲು ಆಗಸ್ಟ್ ತಿಂಗಳಿನಲ್ಲಿ ಆರ್ ಬಿಐ ಹೊಸ 200 ರು. ಹಾಗೂ 50 ರು. ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು.

Related Articles

Leave a comment

Back to Top

© 2015 - 2017. All Rights Reserved.