ಹೊಸ ವರ್ಷದಂದು ವಾಟ್ಸ್’ಆ್ಯಪ್ ಸ್ಥಗಿತಗೊಳ್ಳಲು ಭಾರತೀಯರೇ ಕಾರಣವಂತೆ..!

International, Kannada News, Technology No Comments on ಹೊಸ ವರ್ಷದಂದು ವಾಟ್ಸ್’ಆ್ಯಪ್ ಸ್ಥಗಿತಗೊಳ್ಳಲು ಭಾರತೀಯರೇ ಕಾರಣವಂತೆ..! 23

ನವದೆಹಲಿ: ಹೊಸ ವರ್ಷದ ಮುನ್ನಾ ದಿನ ವಾಟ್ಸ್’ಆ್ಯಪ್ ಸ್ಥಗಿತಗೊಳ್ಳುವುದಕ್ಕೆ ಭಾರತೀಯರು ಸಿಕ್ಕಾಪಟ್ಟೆ ಸಂದೇಶಗಳನ್ನು ಶೇರ್ ಮಾಡಿದ್ದೇ ಕಾರಣ ಎಂದು ವಾಟ್ಸ್’ಆ್ಯಪ್ ಸಂಸ್ಥೆ ಹೇಳಿದೆ.

ಹೊಸ ವರ್ಷದ ಮುನ್ನಾ ದಿನ ವಾಟ್ಸ್ ಆ್ಯಪ್‌ನಲ್ಲಿ ವಿಶ್ವದ್ಯಾಂತ 7500 ಕೋಟಿ ಸಂದೇಶಗಳು ರವಾನೆಯಾಗಿದ್ದು, ಅದರಲ್ಲಿ 2000 ಕೋಟಿ ಸಂದೇಶಗಳನ್ನು ಭಾರತೀಯರದ್ದೇ ಆಗಿದೆ.

ಈ ಮಾಹಿತಿ ಹಂಚಿಕೊಂಡ ಫೇಸ್‌ಬುಕ್ ಸ್ವಾಮ್ಯದ ವಾಟ್ಸ್‌ಆ್ಯಪ್, ‘ಹೊಸ ವರ್ಷದ ಮುನ್ನ ದಿನದಷ್ಟು ಸಂದೇಶಗಳು ಎಂದೂ ಹಂಚಿಕೆಯಾಗಿರಲಿಲ್ಲ. ಆ ದಿನ ಭಾರದಲ್ಲಿಯೇ 1300 ಕೋಟಿ ಚಿತ್ರಗಳು, 500 ಕೋಟಿ ವೀಡಿಯೋಗಳು ರವಾನೆಯಾಗಿದ್ದು, ಸೇವೆಯಲ್ಲಿ ವ್ಯತ್ಯಯವಾಗಿದ್ದಕ್ಕೆ ಇಷ್ಟು ಸಂಖ್ಯೆಯ ಸಂದೇಶಗಳು ಒಟ್ಟಿಗೇ ಶೇರ್ ಆಗಿದ್ದೇ ಕಾರಣ’ ಎಂದು ಕಂಪನಿ ಹೇಳಿದೆ.

Related Articles

Leave a comment

Back to Top

© 2015 - 2017. All Rights Reserved.