ಗೋವಾ ಸಿಎಂ ರನ್ನು ಮಾತುಕತೆಗೆ ಆಹ್ವಾನಿಸಿದ ಪ್ರಧಾನಿ ಮೋದಿ: ಹರಿಯಲಿದಿಯೇ ಮಹದಾಯಿ..?

BREAKING NEWS, Kannada News, National, Top News No Comments on ಗೋವಾ ಸಿಎಂ ರನ್ನು ಮಾತುಕತೆಗೆ ಆಹ್ವಾನಿಸಿದ ಪ್ರಧಾನಿ ಮೋದಿ: ಹರಿಯಲಿದಿಯೇ ಮಹದಾಯಿ..? 21

ನವದೆಹಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಪ್ರಧಾನಿ ಮೋದಿ ಅವರು ಮಾತುಕತೆಗೆ ಆಹ್ವಾನಿಸಿದ್ದಾರೆ. ಮಾತುಕತೆ ವೇಳೆ ಮಹಾದಾಯಿ ವಿಷಯ ಚರ್ಚೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ದೆಹಲಿಯಲ್ಲಿ ಜನವರಿ 8ರಂದು ಮಾತುಕತೆಗೆ ಬನ್ನಿ ಎಂದು  ಪ್ರಧಾನಿ ಮೋದಿ ಅವರು ಮನೋಹರ ಪರಿಕ್ಕರ್`ಗೆ ಆಮಂತ್ರಣ ನೀಡಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಈ ಮಾತುಕತೆ ವೇಳೆ ಮಹದಾಯಿ ವಿಷಯವೇ ಮುಖ್ಯ ಆಕರ್ಷಣೆಯಾಗಿರಲಿದೆ. ಒಂದೊಮ್ಮೆ ಮೋದಿ ಮಹದಾಯಿ ಬಗ್ಗೆ ಮಾತನಾಡಿದರೆ ಅದು ನಿಜಕ್ಕೂ ದೊಡ್ಡ ಬೆಳವಣಿಗೆ.

ದಶಕಗಳಿಂದ‌ ಕಗ್ಗಂಟಾಗಿರುವ ಮಹದಾಯಿ ನದಿ ನೀರಿನ ವ್ಯಾಜ್ಯ ಈಗಲಾದರೂ ಇತ್ಯರ್ಥ ಆಗುತ್ತಾ..? ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸ್ತಾರಾ..? ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಾತುಕತೆಗೆ ವೇದಿಕೆ ನಿರ್ಮಿಸ್ತಾರಾ..? ಎಂಬ ಪ್ರಶ್ನೆಗಳಿಗೆ ಈ ಭೇಟಿ ಉತ್ತರ ನೀಡುತ್ತ ಎಂದು ಕಾದು ನೋಡಬೇಕಿದೆ.

Related Articles

Leave a comment

Back to Top

© 2015 - 2017. All Rights Reserved.