ಮೊದಲ ಟೆಸ್ಟ್ ಪಂದ್ಯ: ಸಾಧಾರಣ ಮೊತ್ತಕ್ಕೆ ಕುಸಿದ ಆಫ್ರಿಕಾ;- ಭಾರತಕ್ಕೂ ಆಘಾತ

Kannada News, Sports No Comments on ಮೊದಲ ಟೆಸ್ಟ್ ಪಂದ್ಯ: ಸಾಧಾರಣ ಮೊತ್ತಕ್ಕೆ ಕುಸಿದ ಆಫ್ರಿಕಾ;- ಭಾರತಕ್ಕೂ ಆಘಾತ 18

ಕೇಪ್ಟೌನ್: ಭಾರತ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಇತ್ತಂಡಗಳು ರನ್ ಗಳಿಸಲು ತಿಣುಕಾಡಿವೆ.

ವೇಗಿ ಭುವನೇಶ್ವರ್ ಕುಮಾರ್ ದಾಳಿಗೆ ಕುಸಿದ ಎದುರಾಳಿ ತಂಡ ಮೊದಲ ಇನಿಂಗ್ಸ್’ನಲ್ಲಿ 286 ರನ್’ಗಳಿಗೆ ಆಲ್ ಔಟ್ ಆಗಿದೆ. ಇದಕ್ಕುತ್ತರವಾಗಿ ತನ್ನ ಇನ್ನಂಗ್ಸ್ ಆರಂಭಿಸಿರುವ ಭಾರತ ಆರಂಭಿಕ ಆಘಾತ ಅನುಭವಿಸಿದ್ದು, 11 ಓವರ್’ಗಳಲ್ಲಿ 28/3 ರನ್ ಗಳಿಸಿದೆ.

ಕೇಪ್’ಟೌನ್’ನಲ್ಲಿ ನ್ಯೂ’ಲ್ಯಾಂಡ್ಸ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಫ್ರಿಕಾ ತಂಡ 12 ರನ್’ಗಳಲ್ಲಿಯೇ 3 ವಿಕೇಟ್ ಕಳೆದುಕೊಂಡಿತು. ವೇಗೋತ್ಕರ್ಷ ಭುವನೇಶ್ವರ್ ಕುಮಾರ್ ಬೌಲಿಂಗ್ ದಾಳಿಗೆ ತತ್ತರಿಸಿದರು.

ಎಬಿಡಿ, ಡುಪ್ಲೆಸೀಸ್ ಶತಕದ ಜೊತೆಯಾಟ   

3 ವಿಕೇಟ್ ಕಳೆದುಕೊಂಡ ನಂತರ ಸ್ಫೋಟಕ ಬ್ಯಾಟ್ಸ್’ಮೆನ್ ಎಬಿ ಡಿವಿಲಿಯರ್ಸ್ ಹಾಗೂ ನಾಯಕ ಡುಪ್ಲೆಸೀಸ್ ಶತಕದ ಜೊತೆಯಾಟದ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಇವರಿಬ್ಬರು 4ನೇ ವಿಕೆಟ್’ಗೆ 126 ರನ್ ಕಲೆ ಹಾಕಿದರು.

ಎಬಿಡಿ ಅರ್ಧ ಶತಕ (65:84 ಎಸೆತ, 11 ಬೌಂಡರಿ) ದಾಖಲಿಸಿದ ನಂತರ  ಮೊದಲ ಟೆಸ್ಟ್ ಆಡಿದ ಬುಮ್ರಾ’ಗೆ ಬೌಲ್ಡ್ ಆದರು. ಇದರ ಬೆನ್ನಲ್ಲೆ ಪ್ಲೆಸೀಸ್ ಕೂಡ 62(104 ಎಸೆತ, 12 ಬೌಂಡರಿ) ರನ್ ಗಳಿಸಿದ ನಂತರ ಪಾಂಡ್ಯ ಬೌಲಿಂಗ್’ನಲ್ಲಿ ಸಾಹಗೆ ಕ್ಯಾಚಿತ್ತು ಪೆವಿಲಿಯನ್’ಗೆ ತೆರಳಿದರು. ವಿಕೇಟ್ ಕೀಪರ್ ಡಿಕಾಕ್(43) ಫಿಲೆಂಡರ್(23), ಮಹರಾಜ್(35) ರಬಡಾ(26) ಹಾಗೂ ಸ್ಟೈನ್(16) ಒಂಚೂರು ಭರವಸೆ ಮೂಡಿಸಿ ತಂಡದ ಮೊತ್ತವನ್ನು 280ರ ಗಡಿ ದಾಟಿಸಿದರು.

ಭಾರತದ ಪರ ಭುವಿ 87/4, ಆರ್. ಆಶ್ವಿನ್ 21/2,ಶಮಿ,ಬುಮ್ರಾ, ಪಾಂಡ್ಯ ತಲಾ ಒಂದೊಂದು ವಿಕೇಟ್ ಕಬಳಿಸಿ ದಕ್ಷಿಣ ಆಫ್ರಿಕಾ ತಂಡವನ್ನು 73.1 ಓವರ್’ಗಳಲ್ಲಿ 286 ರನ್’ಗಳಿಗೆ ನಿಯಂತ್ರಿಸಿದರು.

ವಿಜಯ್, ಧವನ್, ಕೊಹ್ಲಿ ವಿಫಲ

ಸಾಧಾರಣ ಗುರಿ ಬೆನ್ನತ್ತಿರುವ ವಿರಾಟ್ ಕೊಹ್ಲಿ ಪಡೆ ಆರಂಭಿಕ ಆಘಾತ ಅನುಭವಿಸಿದ್ದಾರೆ. 11 ಓವರ್ ಆಗುವಷ್ಟರಲ್ಲಿಯೇ ಕೇವಲ 28 ರನ್’ಗಳಿಗೆ ಟೀಂ ಇಂಡಿಯಾದ 3 ಪ್ರಮುಖ ವಿಕೆಟ್’ಗಳು ಪತನವಾಗಿವೆ. ಮುರಳಿ ವಿಜಯ್ (1), ಶಿಖರ್ ಧವನ್(16) ಹಾಗೂ ಭರವಸೆಯ ಆಟಗಾರ ವಿರಾಟ್ ಕೊಹ್ಲಿ(5) ರನ್’ಗಳಿಗೆ ಔಟಾಗಿದ್ದು ಭಾರತ ತಂಡ ಒತ್ತಡದ ಪರಿಸ್ಥಿತಿಯಲ್ಲಿದೆ.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 73.1 ಓವರ್’ಗಳಲ್ಲಿ 286/10

ಭಾರತ: ಮೊದಲ ಇನಿಂಗ್ಸ್ 11 ಓವರ್’ಗಳಲ್ಲಿ 28/3

Related Articles

Leave a comment

Back to Top

© 2015 - 2017. All Rights Reserved.